Sunday, April 28, 2024
spot_imgspot_img
spot_imgspot_img

ಬೆಂಗಳೂರು: ಏರ್​ಪೋರ್ಟ್​ನಲ್ಲಿ 1.29 ಕೋಟಿಯ ಚಿನ್ನ ಜಪ್ತಿ,12 ಜನ ವಶಕ್ಕೆ..!

- Advertisement -G L Acharya panikkar
- Advertisement -

ಬೆಂಗಳೂರು : ಭಾರಿ ಪ್ರಮಾಣದಲ್ಲಿ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಅಧಿಕಾರಿಗಳು ಭೇದಿಸಿದ್ದಾರೆ.

ಆರೋಪಿಗಳಿಂದ 1.29 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದು ಈ ಸಂಬಂಧ 12 ಜನ ಪ್ರಯಾಣಿಕರನ್ನು ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇವರಿಂದ 1.29 ಕೋಟಿ ರೂಪಾಯಿ ಮೌಲ್ಯದ 2 ಕೆಜಿ 86 ಗ್ರಾಂ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಮಸ್ಕಟ್ ಮತ್ತು ಮದೀನಾದಿಂದ ಬಂದಿದ್ದ ಪ್ರಯಾಣಿಕರು ಇವರಾಗಿದ್ದು, ಮೈಮೇಲೆ ಬಂಗಾರ ಧರಿಸಿದರೆ ಕೇಳಲ್ಲ ಅಂದುಕೊಂಡಿದ್ದರು.ಇದೀಗ ಚಿನ್ನಕ್ಕೆ ಸರಿಯಾದ ಬಿಲ್ ಟ್ಯಾಕ್ಸ್ ಇಲ್ಲದ ಹಿನ್ನೆಲೆ ವಶಕ್ಕೆ ಪಡೆಯಲಾಗಿದ್ದು ಈ ಸಂಬಂಧ ತನಿಖೆ ಮುಂದುವರೆದಿದೆ.

- Advertisement -

Related news

error: Content is protected !!