


ವಿಟ್ಲ: ಚಿರಾಂತನ ಚಾರಿಟೇಬಲ್ ಟ್ರಸ್ಟ್ ಉಕ್ಕುಡ ಇದರ ನೂತನ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರುಗೊಂಡ 10.00 ಲಕ್ಷ ಮೊತ್ತದ ಮಂಜೂರಾತಿ ಪತ್ರದ ವಿತರಣೆ ಕಾರ್ಯಕ್ರಮವು ಇಂದು ನಡೆಯಿತು. ಮಂಜೂರಾತಿ ಪತ್ರವನ್ನು ವಿಟ್ಲ ಜೈನ ಬಸದಿ ಅಧ್ಯಕ್ಷರಾದ ಗೌರವಾನ್ವಿತ ಜಿತೇಶ್ ಜೈನ್ (ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳಾದ ಗೌರವಾನ್ವಿತ ಶ್ರೀ ಡಿ.ಸುರೇಂದ್ರ ಕುಮಾರ್ ರವರ ಅಳಿಯ) ವಿತರಣೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಚಿರಂತನ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ತೇಜಸ್ವಿ ಶಂಕರ್ ಜೂನಿಯರ್, ವಿಟ್ಲ ವಲಯದ ಜನ ಜಾಗೃತಿ ಅಧ್ಯಕ್ಷರಾದ ಕೃಷ್ಣಯ್ಯ ಬಳ್ಳಾಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ್, ಜೈನ ಬಸದಿಯ ದರ್ಶನ ಜೈನ್, ಜನಜಾಗೃತಿ ಮಾಜಿ ಅಧ್ಯಕ್ಷರುಗಳಾದ ಕಿರಣ್ ಹೆಗ್ಡೆ, ಬಾಲಕೃಷ್ಣ ಆಳ್ವ, ಕೆಯ್ಯೂರ್ ನಾರಾಯಣ ಭಟ್, ಜನಜಾಗೃತಿ ಸದಸ್ಯರಾದ ನಟೇಶ್ ವಿಟ್ಲ, ಕೇಪು ವಲಯದ ಜನಜಾಗೃತಿ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಪೆರ್ನೆ ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷರು ರೋಹಿತಾಕ್ಷ ಬಾಣಬೆಟ್ಟು ಒಕ್ಕೂಟಗಳ ವಲಯಧ್ಯಕ್ಷರಾದ ಶ್ರೀಮತಿ ಪ್ರಮೀಳಾ, ರಾಜೇಂದ್ರ ರೈ, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಅಧ್ಯಕ್ಷರಾದ ಸುದರ್ಶನ್ ಪಡಿಯಾರ್, ವಿಟ್ಲ ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ಯೋಜನಾಧಿಕಾರಿಗಳಾದ ಸುರೇಶ ಗೌಡ, ಒಕ್ಕೂಟದ ಅಧ್ಯಕ್ಷರುಗಳಾದ ಶ್ರೀಮತಿ ಸೀತಾಲಕ್ಷ್ಮಿ, ವಿಶ್ವನಾಥ್, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ವಿಪತ್ತು ಸದಸ್ಯರು, ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕರಾದ ಜಗದೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ನಾ ಭಾರವಿ ವಂದಿಸಿದರು.








