- Advertisement -
- Advertisement -
ನೆಲ್ಯಾಡಿ:- ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸಿಗದೆ ಹೃದಯಾಘಾತವಾಗಿದ್ದ ವ್ಯಕ್ತಿಯೊಬ್ಬರು ಸಾವು ಆಗಿದೆ. ಹೃದಯಾಘಾತ ಆದ ವ್ಯಕ್ತಿ’ ಬಾಬು ಗೌಡರು ‘ ರನ್ನು
ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಸಿಗದೆ ನರಳಾಡಿದ ಕುಟುಂಬದವರು ನಿನ್ನೆ(ಭಾನುವಾರ)ತಡರಾತ್ರಿ ನೆಲ್ಯಾಡಿಯಲ್ಲಿ ನಡೆದ ಘಟನೆಯಾಗಿದೆ.
ಹೃದಯಾಘಾತ ಆದ ಹಿನ್ನಲೆ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಕುಟುಂಬವು,ಇಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುದಿಲ್ಲ ಎಂದು ಮಂಗಳೂರಿಗೆ ಕರೆದುಕೊಂಡು ಹೋಗಿ ಎಂದ ಸಲಹೆ ನೀಡಿದ ಡಾಕ್ಟರ್. ಕುಟುಂಬವು ತಕ್ಷಣ 108 ಗೆ ಕರೆ ಮಾಡಿದಾಗ ,108 ಸಿಬ್ಬಂದಿಗಳು ಸರಿಯಾದ ಸ್ಪಂದಿಸದ ಕಾರಣ , 2 ಗಂಟೆ 108 ಆಂಬ್ಯುಲೆನ್ಸ್ ಕಾದು ಬಳಿಕ ಖಾಸಗಿ ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋದ ಕುಟುಂಬವು ,ಮಂಗಳೂರಿನ ಆಸ್ಪತ್ರೆ ತಲುಪಿ ಕೆಲವೇ ನಿಮಿಷದಲ್ಲಿ ಪ್ರಾಣ ಬಿಟ್ಟ ಬಾಬು ಗೌಡರು…ಸರಿಯಾದ ಸಮಯಕ್ಕೆ ಸಿಗದ 108 ಆಂಬ್ಯುಲೆನ್ಸ್ ವಿರುದ್ಧ ಕುಟುಂಬಸ್ತರು ಆಕ್ರೋಶ ವಕ್ತಪಡಿಸಿದ್ದಾರೆ.
- Advertisement -