Monday, April 29, 2024
spot_imgspot_img
spot_imgspot_img

110ಕ್ಕೆ ಕಾಲಿಟ್ಟ ಪೆಟ್ರೋಲ್.! ಡೀಸೆಲ್ ಬೆಲೆಯೂ ಏರಿಕೆ

- Advertisement -G L Acharya panikkar
- Advertisement -

ದೇಶದಲ್ಲಿ ಕಳೆದ 14 ದಿನದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ, ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್​ಗೆ 40 ಪೈಸೆ ಹೆಚ್ಚಿಸಲಾಗಿದೆ. ಭಾನುವಾರ ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 109.01 ರೂ., ಡಿಸೇಲ್‍ಗೆ 92.85 ರೂ. ಆದರೆ ಇದೀಗ ಮತ್ತೆ ಹೆಚ್ಚಳವಾಗಿದ್ದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.110ಕ್ಕೆ ಸಾಗಿದೆ.

ಕಳೆದ 14 ದಿನಗಳಲ್ಲಿ 11 ಬಾರಿ ಬೆಲೆ ಏರಿಕೆ ಮಾಡುವ ಮೂಲಕ ಪೆಟ್ರೋಲ್ ಮತ್ತು ಡೀಸಲೆ ದರ ರೂ.8.40 ಏರಿಕೆಯಾಗಿದೆ.14ನೇ ಬಾರಿಯ ಏರಿಕೆಯ ನಂತರ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ.103.81 ಮುಟ್ಟಿದೆ. ಲೀಟರ್ ಡೀಸೆಲ್ ಬೆಲೆ ರೂ.95.07 ತಲುಪಿದೆ.

ದೆಹಲಿಯಲ್ಲಿ ಪ್ರತಿ ಲೀ. ಪೆಟ್ರೋಲ್ ಬೆಲೆ 103.41 ರೂ. ಡೀಸೆಲ್ ಬೆಲೆ ರೂ.94.67 ರೂ. ಏರಿಕೆಯಾಗಿದೆ. ಮುಂಬೈನಲ್ಲಿ ಲೀ. ಪೆಟ್ರೋಲ್ ದರ 118.41 ರೂ. ಡೀಸೆಲ್ 102.64 ರೂ. ದಾಖಲಾಗಿದೆ. ಚೆನ್ನೈನಲ್ಲಿ ಲೀ. ಪೆಟ್ರೋಲ್ ದರ 108.21 ರೂ. ಹಾಗೂ ಡೀಸೆಲ್ ದರ 99.04 ರೂ. ಇದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ರಾಜ್ಯಗಳ ವ್ಯಾಟ್‌ ತೆರಿಗೆ ಸೇರಿದ ಬಳಿಕ ಬೆಲೆ ಏರಿಕೆಯಾಗುತ್ತದೆ.

- Advertisement -

Related news

error: Content is protected !!