




ಪದ್ಮುಂಜ : ವಿಶ್ವ ಹಿಂದೂ ಪರಿಷತ್ ಭಜರಂಗದಳ, ಪದ್ಮುಂಜ ಘಟಕ , ದುರ್ಗಾ ವಾಹಿನಿ ಮತ್ತು ಮಾತೃ ವಾಹಿನಿ ಇದರ ಸಂಯುಕ್ತ ಆಶ್ರಯದಲ್ಲಿ 11 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಹಾಗೂ ಚಂಡಿಕಾ ಹೋಮ ಕಾರ್ಯಕ್ರಮವು 12-10-2024ನೇ ಶನಿವಾರ ಶ್ರೀ ಉಮಾಮಹೇಶ್ವರ ದೇವಸ್ಥಾನ, ಮಂಗಲ್ಲು – ಪದ್ಮುಂಜ ದಲ್ಲಿ ನಡೆಯಲಿದೆ.
ಬೆಳಿಗ್ಗೆ ಗಂಟೆ 7.00ಕ್ಕೆ ಧಾರ್ಮಿಕ ವಿಧಿವಿಧಾನ ವಿಜಯ ಕುಮಾರ್ ತಂತ್ರಿಗಳು ಮಲೆಂಗಲ್ಲು ಇವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ವಾಚನ-ಪಂಚಗವ್ಯ-ಬಿಂಬಶುದ್ಧ, ಬೆಳಿಗ್ಗೆ ಗಂಟೆ 8.00ಕ್ಕೆ ಶಾರದಾ ಬಿಂಬ ಪ್ರತಿಷ್ಠೆ, ಬೆಳಗ್ಗಿನ ಪೂಜೆ , ಬೆಳಿಗ್ಗೆ ಗಂಟೆ 9.00ಕ್ಕೆ ಗಣಪತಿ ಹೋಮ, ಚಂಡಿಕಾ ಹೋಮ ಪ್ರಾರಂಭವಾಗುವುದು. ಬೆಳಿಗ್ಗೆ ಗಂಟೆ 10.00ಕ್ಕೆವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಗಂಟೆ 12.30ಕ್ಕೆ ಪೂರ್ಣಾಹತಿ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಮಧ್ಯಾಹ್ನ ಗಂಟೆ 1.00ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಜರಗಳಿದೆ.
ಮಧ್ಯಾಹ್ನ ಗಂಟೆ 3.30ಕ್ಕೆ ಸಾಯಂಕಾಲ ಪೂಜೆ, ರಥಪೂಜೆ ಬಲಿ, ಪ್ರಸಾದ ವಿತರಣೆ ನಡೆಯಲಿದೆ ನಂತರ ಸಂಜೆ ಗಂಟೆ 4.00ಕ್ಕೆ ಶ್ರೀ ಶಾರದ ಮಾತೆಯ ಶೋಭಾಯಾತ್ರೆಯು ಮಲೆಂಗಲ್ಲು ದೇವಸ್ಥಾನದಿಂದ ಹೊರಟು ಪದ್ಮುಂಜ ಪೇಟೆ, ಮಲೆಂಗಲ್ಲು, ಗಾಡಕೋಡಿ, ಕೊರಿಂಜ, ಉರುವಾಲು ಪದವು, ಪದವು. ಬನಾರಿ ಹಾಗೂ ಕುಪ್ಪೆಟ್ಟಿಯಲ್ಲಿ ವಿಸರ್ಜನೆ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.