Thursday, April 25, 2024
spot_imgspot_img
spot_imgspot_img

ದೀರ್ಘಕಾಲದ ಗೆಳತಿ ಆಥಿಯಾ ಶೆಟ್ಟಿ ಕೈ ಹಿಡಿದ ಕೆ.ಎಲ್‌ ರಾಹುಲ್‌

- Advertisement -G L Acharya panikkar
- Advertisement -

ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಆಥಿಯಾ ಶೆಟ್ಟಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಮುಂಬೈನ ಕಾಂಡ್ಲಾ ಫಾರ್ಮ್ ಹೌಸ್ ನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ಹಾಗೂ ಕ್ರಿಕೆಟ್ ನ ಗಣ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದ ಸಮಾರಂಭದಲ್ಲಿ ದೀರ್ಘಕಾಲದ ಗೆಳತಿ ಆಥಿಯಾ ಅವರನ್ನು ರಾಹುಲ್ ವರಿಸಿದರು.

ಮೂರು ದಿನಗಳ ಕಾಲ ನಡೆದ ಸಂಗೀತ, ಮೆಹೆಂದಿ ಸೇರಿದಂತೆ ಕಾರ್ಯಕ್ರಮಗಳಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಜನವರಿ 23 ಅಂದರೆ ಸೋಮವಾರ ಸಂಜೆ 4 ಗಂಟೆಗೆ ನಿಗದಿಯಾಗಿದ್ದ ಮುಹೂರ್ತದಲ್ಲಿ ಆಥಿಯಾಗೆ ಕೆಎಲ್ ರಾಹುಲ್ ತಾಳಿ ಕಟ್ಟಿದರು.

ಮದುವೆ ಸಮಾರಂಭದಲ್ಲಿ ಅನುಪಮ್ ಖೇರ್, ಇಶಾಂತ್ ಶರ್ಮ, ಕೃಷ್ಣ ಶ್ರಾಫ್ ಮುಂತಾದವರು ಮುಹೂರ್ತದಲ್ಲಿ ಪಾಲ್ಗೊಂಡಿದ್ದರು. ಸಂಜೆ ನಡೆಯುವ ರಿಸೆಪ್ಷೆನ್ ನಲ್ಲಿ ಬಾಲಿವುಡ್ ಹಾಗೂ ಕ್ರಿಕೆಟ್ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!