Wednesday, July 2, 2025
spot_imgspot_img
spot_imgspot_img

12-15 ವರ್ಷದ ಮಕ್ಕಳಿಗೆ ಮಾರ್ಚ್‌‌ನಿಂದ ಕೊರೊನಾ ಲಸಿಕೆ ಆರಂಭ

- Advertisement -
- Advertisement -
suvarna gold

ನವದೆಹಲಿ: 12ರಿಂದ 15 ವರ್ಷದ ಮಕ್ಕಳಿಗೆ ಮಾರ್ಚ್ ತಿಂಗಳಿನಿಂದ ಕೊರೊನಾ ಲಸಿಕೆಯನ್ನು ದೇಶದಲ್ಲಿ ಪರಿಚಯಿಸಲಾಗುವುದು ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಮುಖ್ಯಸ್ಥ ಎನ್.ಕೆ. ಅರೋರಾ ಹೇಳಿದ್ದಾರೆ.

‌ಈ ಕುರಿತು ಮಾಹಿತಿ ನೀಡಿರುವ ಅವರು, ಲಸಿಕೆಯ ಮೊದಲ ಡೋಸ್ ಅನ್ನ ಜನವರಿ ಅಂತ್ಯದ ವೇಳೆಗೆ 15 ರಿಂದ 18 ವರ್ಷ ವಯಸ್ಸಿನ ಎಲ್ಲಾ 74 ದಶಲಕ್ಷ ಹದಿಹರೆಯದವರಿಗೆ ಫೆಬ್ರವರಿಯಲ್ಲಿ ಎರಡನೇ ಡೋಸ್ ನೀಡುವ ಗುರಿಯನ್ನ ಹೊಂದಿದೆ. ಇದರ ನಂತರ ಮಾರ್ಚ್ ಆರಂಭದಿಂದ 12 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದರು.

ಇನ್ನು ಜನವರಿ ತಿಂಗಳ 3 ರಂದು 15 ರಿಂದ 18 ವರ್ಷ ವಯಸ್ಸಿನ ಹದಿಹರೆಯದವರಿಗೆ ಲಸಿಕೆ ಕಾರ್ಯಕ್ರಮವು ಪ್ರಾರಂಭವಾಗಿದ್ದು, ಲಸಿಕೆ ಅಭಿಯಾನ ಪ್ರಾರಂಭವಾದಾಗ 5 ದಶಲಕ್ಷಕ್ಕೂ ಹೆಚ್ಚು ಮಕ್ಕಳು ತಮ್ಮ ಮೊದಲ ಲಸಿಕೆ ಡೋಸ್ ಪಡೆಯಲು ನೋಂದಾಯಿಸಿಕೊಂಡಿದ್ದಾರೆ.

ಇಲ್ಲಿವರೆಗೆ ಒಟ್ಟು 3.38 ದಶಲಕ್ಷ ಮಕ್ಕಳು ಲಸಿಕೆ ಪೂರಕಗಳನ್ನು ಪಡೆದ್ದು, ಇದು ಅವರ ವ್ಯಾಪ್ತಿಯ ಸುಮಾರು 50 ಪ್ರತಿಶತವನ್ನು ತೋರಿಸುತ್ತದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!