- Advertisement -
- Advertisement -
ವಿಟ್ಲ : ಕಲಾತಪಸ್ವಿ ಸಾಂಸ್ಕೃತಿಕ ತಂಡ ಆಯೋಜಿಸಿದ್ದ ಮುದ್ದು ಪುಟಾಣಿಗಳ ಆನ್‌ಲೈನ್ ಭಾವಚಿತ್ರ ಸ್ಪರ್ಧೆ “ಕಲಾಕಣ್ಮಣಿ-2026” ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಸುಮಾರು ಎರಡುವರೆ ತಿಂಗಳ ಕಾಲ 5 ಸುತ್ತುಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಗಳು ಹಾಗೂ ಮಹಾರಾಷ್ಟ್ರ, ಕೇರಳ ರಾಜ್ಯಗಳ ಸ್ಪರ್ಧಿಗಳು ಭಾಗವಹಿಸಿದ್ದರು.5 ಸುತ್ತುಗಳಲ್ಲಿಯೂ ಅಜೇಯರಾಗಿ ಅನುಶ್ರೀ ಎಸ್, ಚಾಮರಾಜನಗರ ಪ್ರಥಮ ಸ್ಥಾನ ಪಡೆದರು.
ಗೋಕುಲ್ ಎಂ.ಪಿ, ದಾವಣಗೆರೆ ದ್ವಿತೀಯ, ಸಾನ್ವಿಕ, ಉಡುಪಿ ತೃತೀಯ ಹಾಗೂ ದಿತ್ಯ ಸುಜನ್ ದೇವಸ್ಯ ಚತುರ್ಥ ಸ್ಥಾನ ಪಡೆದುಕೊಂಡರು.ವಿಜೇತರಿಗೆ ಬಹುಮಾನ ರೂಪವಾಗಿ ಪ್ರಥಮ:2,001 ₹ ನಗದು + ಕಲಾಕಣ್ಮಣಿ ಟ್ರೋಫಿ + ಪ್ರಶಸ್ತಿ ಪತ್ರದ್ವಿತೀಯ:1,001 ₹ ನಗದು + ಕಲಾಕಣ್ಮಣಿ ಟ್ರೋಫಿ + ಪ್ರಶಸ್ತಿ ಪತ್ರ ತೃತೀಯ:501 ₹ ನಗದು + ಕಲಾಕಣ್ಮಣಿ ಟ್ರೋಫಿ + ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
- Advertisement -








