Thursday, June 25, 2026
spot_imgspot_img
spot_imgspot_img

ದಾಖಲೆ ಇಲ್ಲದ ಹಳೆಯ ಮನೆಗಳಿಗೂ ಇ-ಸ್ವತ್ತು ನೀಡಲು ನಿಯಮಗಳಿಗೆ ತಿದ್ದುಪಡಿ ತರಲಾಗುವುದು: ಸಚಿವ ಈಶ್ವರ ಖಂಡ್ರೆ

- Advertisement -
- Advertisement -

ಬೆಂಗಳೂರು: ಗ್ರಾಮಠಾಣಾ ವ್ಯಾಪ್ತಿಯಲ್ಲಿ ದಾಖಲೆಇಲ್ಲದ ಹಳೆಯ ಮನೆಗಳಿಗೆ ಇ-ಸ್ವತ್ತು ನೀಡಲು ನಿಯಮಗಳಿಗೆ ತಿದ್ದುಪಡಿ ತರಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಅಧಿಕಾರಿಗಳ ಜತೆ ವಿಬಿ-ಜಿ ರಾಮ್ ಜಿ ಮತ್ತು ಇ-ಸ್ವತ್ತು ವಿಷಯಗಳ ಕುರಿತು ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ರಾಜ್ಯದಲ್ಲಿ ಸುಮಾರು 65 ಲಕ್ಷ ಆಸ್ತಿಗಳು ಗ್ರಾಮಠಾಣಾ ವ್ಯಾಪ್ತಿಯಲ್ಲಿ ಬರುತ್ತವೆ. ಪೂರ್ವಜರಿಂದ ಬಂದ ಬಳುವಳಿಯಾಗಿದ್ದು, ಕೆಲವರ ಬಳಿ ತಮ್ಮ ಸ್ವತ್ತಿಗೆ ಸಂಬಂಧಿಸಿದ ದಾಖಲೆ ಇಲ್ಲ. ಹೀಗಾಗಿ ಒಂದು ಬಾರಿ ನಿಯಮ ಸರಳಗೊಳಿಸಿ 100 ದಿನಗಳ ಒಳಗಾಗಿ ಗ್ರಾಮಠಾಣಾ ಆಸ್ತಿಗಳಿಗೆ ಇ-ಖಾತಾ ವಿತರಿಸಲಾಗುವುದು. ಗ್ರಾಮೀಣ ಜನರಿಗೆ ತೊಂದರೆ ಆಗದಂತೆ ಮತ್ತು ಸರ್ಕಾರದ ಆಸ್ತಿ (ಖರಾಬು, ಗೋಮಾಳ ಇತ್ಯಾದಿ) ಗಳನ್ನು ಸಂರಕ್ಷಿಸಿಕೊಂಡು, ಸ್ವಾಧೀನದಲ್ಲಿರುವವರಿಗೆ ಖಾತಾ ನೀಡಲು ಕ್ರಮ ವಹಿಸಲಾಗುವುದು’ ಎಂದರು. 11ಬಿ ಅರ್ಜಿ ಸಲ್ಲಿಸಲು ಕಾಲಾವಕಾಶ ವಿಸ್ತರಣೆ:’ಆಸ್ತಿಗಳಿಗೆ ನಮೂನೆ 11ಬಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌ವರೆಗೆ ಕಾಲಾವಕಾಶ ವಿಸ್ತರಿಸಲು ಚರ್ಚಿಸಲಾಗಿದೆ. ಈವರೆಗೆ 10.16 ಲಕ್ಷ ಆಸ್ತಿಗಳಿಗೆ ‘ಆಸ್ತಿಗಳಿಗೆ ನಮೂನೆ 11ಬಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌ವರೆಗೆ ಕಾಲಾವಕಾಶ ವಿಸ್ತರಿಸಲು ಚರ್ಚಿಸಲಾಗಿದೆ.

ಈವರೆಗೆ 10.16 ಲಕ್ಷ ಆಸ್ತಿಗಳಿಗೆ ಬಿ-ಖಾತಾ ನೀಡಲಾಗಿದೆ. ಇನ್ನೂ 90 ಲಕ್ಷ ಆಸ್ತಿಗಳಿಗೆ ಎ-ಮತ್ತು ಬಿ-ಖಾತಾ ನೀಡಬೇಕು. ವಸತಿ ಬಡಾವಣೆಯಲ್ಲಿ ಸರ್ಕಾರಿ ಎ ಮತ್ತು ಬಿ-ಖರಾಬು ಜಮೀನು ಬಳಸಿಕೊಂಡು ನಿರ್ಮಾಣ ಮಾಡಿದ ಲೇಔಟ್ ಆಸ್ತಿಗಳಿಗೆ ಇ-ಸ್ವತ್ತು ನೀಡದಂತೆ ಸೂಚಿಸಲಾಗಿದೆ. ಇಂತಹ ಸ್ವತ್ತುಗಳನ್ನು ದಿಶಾಂಕ್ ಆ್ಯಪ್‌ನಲ್ಲಿ ಖರಾಬು ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು,

- Advertisement -

Related news

error: Content is protected !!