Saturday, June 28, 2025
spot_imgspot_img
spot_imgspot_img

15ವರ್ಷದ ಬಾಲಕನ ಜೊತೆ ಎಸ್ಕೇಪ್‌ ಆಗಿದ್ದ 19ವರ್ಷದ ಯುವತಿಗೆ 10 ವರ್ಷ ಶಿಕ್ಷೆ ವಿಧಿಸಿದ ನ್ಯಾಯಾಲಯ..!!

- Advertisement -
- Advertisement -
vtv vitla

ಹದಿನೈದು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 19 ವರ್ಷದ ಯುವತಿಗೆ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಇಂದೋರ್​ ಹೆಚ್ಚುವರಿ ನ್ಯಾಯಾಲಯ ಈ ತೀರ್ಪು ನೀಡಿದೆ. 19 ವರ್ಷದ ಯುವತಿ 15 ವರ್ಷದ ಬಾಲಕನೊಂದಿಗೆ ಎಸ್ಕೇಪ್​ ಆಗಿದ್ದಳು. ಬಳಿಕ ಬಾಲಕನ ತಾಯಿ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ದೂರಿನ ಅನ್ವಯ ತನಿಖೆ ನಡೆಸಿದ ಇಂದೋರ್​ ಪೊಲೀಸರು ಬಾಲಕ ಮತ್ತು ಯುವತಿಯನ್ನು ಅಸ್ಸಾಂನಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದರು. ಗುವಾಹಟಿಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡು ಬಾಲಕನ ಜೊತೆ ಯುವತಿ ಜೀವನ ಸಾಗಿಸುತ್ತಿದ್ದಳು ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ. ಇಬ್ಬರು ವಶಕ್ಕೆ ಪಡೆದ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಇಬ್ಬರ ನಡುವೆ ದೈಹಿಕ ಸಂಪರ್ಕ ನಡೆದಿರುವುದು ಖಚಿತವಾಗಿದೆ. ಅಪ್ರಾಪ್ತನನ್ನು ಕಾಮತೃಷೆಗೆ ಬಳಸಿಕೊಂಡಿದ್ದಕ್ಕೆ ಯುವತಿಯ ವಿರುದ್ಧ ಪೊಕ್ಸೊ ಪ್ರಕರಣವನ್ನು ದಾಖಲಿಸಲಾಗಿದೆ. ಬಾಲಕನನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ.

- Advertisement -

Related news

error: Content is protected !!