Saturday, June 6, 2026
spot_imgspot_img
spot_imgspot_img

ಉಪ್ಪಿನಂಗಡಿ: ಪ್ರಭಾರ ಪಿಡಿಒ ಕುಮಾರಯ್ಯ ಹೃದಯಾಘಾತದಿಂದ ಅಸ್ತಂಗತ

- Advertisement -
- Advertisement -

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ನಲ್ಲಿ ಪ್ರಭಾರ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಕುಮಾರಯ್ಯ (46) ಅವರು ಹೃದಯಾಘಾತದಿಂದ ನಿಧರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಕುದ್ರಡ್ಕ ನಿವಾಸಿಯಾಗಿದ್ದು ಕುಮಾರಯ್ಯ ಅವರಿಗೆ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು.

ಈ ಹಿನ್ನಲೆ ಬಿಡುವು ತೆಗೆದುಕೊಂಡಿದ್ದರು. ಆದರೆ ಭಾನುವಾರ ಎದೆನೋವು ಕಾಣಿಸಿಕೊಂಡಿದೆ. ಮನೆಯವರು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.

ಕುಮಾರಯ್ಯ ಅವರು ಮಚ್ಚಿನ ಗ್ರಾ.ಪಂ. ನಲ್ಲಿ ಗುಮಾಸ್ತರಾಗಿ ಕೆಲಸ ನಿರ್ವಹಿಸುತ್ತಿದ್ದರು. ಬಳಿಕ ಒಂದೂವರೆ ವರ್ಷಗಳ ಹಿಂದೆ ಪದೋನ್ನತಿಗೊಂಡು 34 ನೆಕ್ಕಿಲಾಡಿ ಗ್ರಾ.ಪಂ. ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲಿ ಪಿಡಿಒ ಸ್ಥಾನ ಖಾಲಿ ಇದ್ದ ಹಿನ್ನೆಲೆ ಪ್ರಭಾರ ಪಿಡಿಒ ಆಗಿಯೂ ನಿಯೋಜನೆಗೊಂಡಿದ್ದರು.

- Advertisement -

Related news

error: Content is protected !!