

ಮಂಗಳೂರು: ಬೆಳ್ಳಂ ಬೆಳಗ್ಗೆ ಪೊಲೀಸರು ಮಂಗಳೂರು ಜೈಲಿನ ಮೇಲೆ ದಾಳಿ ಮಾಡಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಂಜಾಮತ್ತು ಡ್ರಗ್ಸ್ ಪತ್ತೆಯಾಗಿದೆ. ಜೊತೆಗೆ ಮೊಬೈಲ್ ಫೋನ್ಗಳು, ಡಿವೈಸ್ಗಳು ಪತ್ತೆಯಾಗಿವೆ. ಮಂಗಳೂರು ಪೊಲೀಸರು ಏಕಾಏಕಿ ಮಂಗಳೂರು ಜೈಲಿನ ಮೇಲೆ ದಾಳಿ ಮಾಡಿದ್ದು ಅಲ್ಲಿ ನಡೆಯುತ್ತಿದ್ದ ಅಕ್ರಮ ಬಯಲಾಗಿದೆ.
ಕೋಡಿಯಾಲ್ ಬೈಲ್ ನಲ್ಲಿರುವ ಜೈಲಿನಲ್ಲಿರುವ ಇಬ್ಬರು ಡಿಸಿಪಿಗಳು, ಮೂವರು ಎಸಿಪಿಗಳು, 15 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಸುಮಾರು 150 ಮಂದಿ ಸಿಬ್ಬಂದಿ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಲಾಗಿದೆ.
ಈ ವೇಳೆ ಹಲವು ವಿಚಾರಣಾಧೀನ ಕೈದಿಗಳ ಬಳಿ ಇಪ್ಪತ್ತೈದು ಮೊಬೈಲ್, ಒಂದು ಬ್ಲೂ ಟೂತ್ ಡಿವೈಸ್, ಐದು ಇಯರ್ ಫೋನ್, ಒಂದು ಪೆನ್ ಡ್ರೈವ್, ಐದು ಚಾರ್ಜರ್, ಒಂದು ಕತ್ತರಿ ಸೇರಿದಂತೆ ವಿವಿಧ ವಸ್ತುಗಳು ಸಿಕ್ಕಿದ್ದು ಪೊಲೀಸರು ಆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಜೈಲು ಖೈದಿಗಳ ಜೊತೆಗಿದ್ದ ಗಾಂಜಾ ಮತ್ತು ಡ್ರಗ್ಸ್ ಪ್ಯಾಕೇಟ್‌ಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ.
ಮುಂಜಾನೆ ನಾಲ್ಕು ಗಂಟೆಯ ವೇಳೆಗೆ ಜೈಲಿನ ಮೇಲೆ ಏಕಕಾಲದಲ್ಲಿ ನೂರೈವತ್ತಕ್ಕೂ ಅಧಿಕ ಪೊಲೀಸರು ದಾಳಿ ಮಾಡಿದರು. ಡ್ರಗ್ಸ್, ಗಾಂಜಾ ಪತ್ತೆಯ ಹಿನ್ನಲೆಯಲ್ಲಿ ತನಿಖೆಗೆ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಆದೇಶ ಹೊರಡಿಸಿದ್ದಾರೆ.