Saturday, May 4, 2024
spot_imgspot_img
spot_imgspot_img

16ನೇ ವಯಸ್ಸಿಗೆ ಸ್ನಾತಕೋತ್ತರ ಪದವಿ ಪೂರೈಸಿದ ಪೋರ

- Advertisement -G L Acharya panikkar
- Advertisement -

ಹೈದರಾಬಾದ್: ಸಾಮಾನ್ಯವಾಗಿ ಮಕ್ಕಳು 16ನೇ ವಯಸ್ಸಿನಲ್ಲಿ ಪ್ರೌಢಶಾಲಾ ಹಂತ ಮುಗಿಸಿದರೆ ಇಲ್ಲೊಬ್ಬ ಬಾಲಕ ಈ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾನೆ!

ಹೈದರಾಬಾದ್‌ನ ಅಗಸ್ತ್ಯ ಜೈಸ್ವಾಲ್ ಎಂಬ 16 ವರ್ಷದ ಬಾಲಕನೇ ಸ್ನಾತಕೋತ್ತರ ಪದವಿ ಪೂರೈಸಿದಾತ. ಅಲ್ಲದೆ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಭಾರತದ ಮೊದಲ ಬಾಲಕ ಎಂಬ ಖ್ಯಾತಿಗೂ ಪಾತ್ರನಾಗಿದ್ದಾನೆ. ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ಅಗಸ್ತ್ಯ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿ ಸಾಧನೆ ಮಾಡಿದ್ದಾನೆ.

ಅಂದಹಾಗೆ ಈ ಬಾಲಕ 9ನೇ ವಯಸ್ಸಿನಲ್ಲಿ ತೆಲಂಗಾಣದಲ್ಲಿ ಎಸೆಸ್ಸೆಲ್ಸಿ ಮಂಡಳಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ಬಳಿಕ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದು, 14 ವರ್ಷದವನಿರುವಾಗ 2020ರಲ್ಲಿ ಪದವಿ ಪೂರ್ಣಗೊಳಿಸಿದ್ದ. ಈ ವಿಚಾರದಲ್ಲಿಯೂ ದೊಡ್ಡ ಸಾಧನೆ ಮಾಡಿದ ಕಿರಿಯನೀತ.

ನನ್ನ ಹೆತ್ತವರಾದ ಅಶ್ವನಿ ಕುಮಾರ್ ಜೈಸ್ವಾಲ್ ಮತ್ತು ಭಾಗ್ಯಲಕ್ಷ್ಮಿ ಜೈಸ್ವಾಲ್ ಅವರ ಪ್ರೋತ್ಸಾಹ, ತರಬೇತಿಯಿಂದಾಗಿ ಸಣ್ಣ ವಯಸ್ಸಿನಲ್ಲೇ ಸ್ನಾತಕೋತ್ತರ ಪದವಿ ಗಳಿಸುವುದು ಸಾಧ್ಯವಾಯಿತು. ಆಸಕ್ತಿ ಇದ್ದರೆ ಅಸಾಧ್ಯ ಎಂಬುದಿಲ್ಲ ಎಂಬುದನ್ನು ಸಾಬೀತುಪಡಿಸಲು ಸವಾಲು ಎದುರಿಸುತ್ತಿದ್ದೇನೆ ಎನ್ನುತ್ತಾನೆ ಬಾಲಕ ಅಗಸ್ತ್ಯ.

5 ವರ್ಷದ ಮಗುವಾಗಿದ್ದಾಗ ಸುಮಾರು 500 ಪ್ರಶ್ನೆಗಳಿಗೆ ಉತ್ತರಿಸಿದ ಈತನ ಅಸಾಮಾನ್ಯ ಪ್ರತಿಭೆಗೆ ಗೂಗಲ್ ಬಾಯ್ ಎಂದೇ ಚಿರಪರಿಚತನಾಗಿದ್ದ. 1.72 ಸೆಕೆಂಡುಗಳಲ್ಲಿ ಎಯಿಂದ ಝಡ್‌ವರೆಗೆ ಟೈಪಿಸಬಲ್ಲ ಸಾಮರ್ಥ್ಯ ಇವನದು. ಇನ್ನು ಎರಡೂ ಕೈಗಳಿಂದ ಬರೆಯುತ್ತಾನೆ. ಟೇಬಲ್ ಟೆನ್ನಿಸ್‌ನಲ್ಲಿ ರಾಷ್ಟ್ರ ಮಟ್ಟದವರೆಗೂ ಬೆಳೆದಿರವ ಈತ ಅಂತಾರಾಷ್ಟ್ರೀಯ ಭಾಷಣ ಮಾಡುವ ನೈಪುಣ್ಯವನ್ನು ಹೊಂದಿದ್ದಾನೆ. ವಿಶೇಷವೆಂದರೆ ಈತ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರ್ತಿ ಮತ್ತು ಕಿರಿಯ ಸಂಶೋಧನಾ ವಿದ್ವಾಂಸರಾದ ನೈನಾ ಜೈಸ್ವಾಲ್ ಅವರ ಕಿರಿಯ ಸಹೋದರ.

- Advertisement -

Related news

error: Content is protected !!