Tuesday, June 23, 2026
spot_imgspot_img
spot_imgspot_img

ಮೀನು ಸತ್ತಿದ್ದಕ್ಕೆ ಮನನೊಂದು ನೇಣಿಗೆ ಶರಣಾದ ಬಾಲಕ..!

- Advertisement -
- Advertisement -

ಕೇರಳ: ಮನೆಯ ಅಕ್ವೇರಿಯಂನಲ್ಲಿದ್ದ ಮುದ್ದಿನ ಮೀನು ಸತ್ತೋಯ್ತು ಎಂದು ಬಾಲಕನೊಬ್ಬ ನೇಣಿಗೆ ಕೊರಳೊಡ್ಡಿರುವ ಘಟನೆ ಕೇರಳದ ಮಲಪ್ಪುರಂನ ಪೊನ್ನಾನಿಯ ಚಂಗರಂಕುಲಂನಲ್ಲಿ ನಡೆದಿದೆ.

13 ವರ್ಷದ ರೋಷನ್ ಮೆನನ್ ಆತ್ಮಹತ್ಯೆಗೆ ಶರಣಾದ ಬಾಲಕ. ತಮ್ಮ ಮನೆಯ ಅಕ್ವೇರಿಯಂನಲ್ಲಿದ್ದ ಮುದ್ದಿನ ಮೀನು ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದಕ್ಕೆ ರೋಷನ್ ಮನನೊಂದಿದ್ದ ಎನ್ನಲಾಗಿದೆ.

ರವೀಂದ್ರನ್ ಅವರ ಪುತ್ರ ರೋಷನ್ ಮೆನನ್ ಶುಕ್ರವಾರ ಬೆಳಿಗ್ಗೆ ತಮ್ಮ ಮನೆಯ ಪಾರಿವಾಳಗಳಿಗೆ ಆಹಾರ ನೀಡಲು ಮನೆಯ ಟೆರೇಸ್‌ ಮೇಲೆ ಹೋಗಿದ್ದಾನೆ. ಒಂದು ಗಂಟೆ ಕಳೆದರೂ ರೋಷನ್ ಕೆಳಗೆ ಬಾರಲೇ ಇಲ್ಲ. ಹೀಗಾಗಿ, ಟೆರೇಸ್‌ ಮೇಲೆ ಹೋಗಿ ನೋಡಿದಾಗ ಟೆರೇಸ್‌ನಲ್ಲಿ ನಿರ್ಮಿಸಲಾದ ಶೆಡ್‌ನಲ್ಲಿ ರೋಷನ್ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಕೂಡಲೇ ಅವರನ್ನು ಅಕ್ಕಪಕ್ಕದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವನು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

- Advertisement -

Related news

error: Content is protected !!