Tuesday, July 1, 2025
spot_imgspot_img
spot_imgspot_img

16 ವರ್ಷದ ಹಿಂದೂ ಬಾಲಕನನ್ನು ಅಪಹರಿಸಿ ಮದುವೆಯಾಗಲು ಮುಂದಾದ 30 ರ ಹರೆಯದ ಮುಸ್ಲಿಂ ಮಹಿಳೆ

- Advertisement -
- Advertisement -

16 ವರ್ಷದ ಹಿಂದೂ ಹುಡುಗನನ್ನು ಅಪಹರಿಸಿ 30 ವರ್ಷದ ಇಬ್ಬರು ಮಕ್ಕಳ ತಾಯಿ ಮದುವೆಯಾದ ಘಟನೆ ಉತ್ತರ ಪ್ರದೇಶನ ಕಾನ್ಪುರದಲ್ಲಿ ನಡೆದಿದೆ. 30 ವರ್ಷದ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದ ಪ್ರಕರಣದಲ್ಲಿ ಆರೋಪದ ಮೇಲೆ ಪೊಲೀಸರು ಈಕೆಯನ್ನು ಬಂಧಿಸಿದ್ದಾರೆ. ಮತ್ತು ನಿಖಾ ಆಗಲು ಸಹಕರಿಸಿದ ಮೌಲ್ವಿ ಸೇರಿದಂರೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ಸಿಮ್ರಾನ್ ಎನ್ನಲಾಗಿದೆ. ಇಬ್ಬರು ಮಕ್ಕಳ ತಾಯಿ ಸಿಮ್ರಾನ್ ಅವರನ್ನು ಮದುವೆಯಾಗಿದ್ದಾನೆ ಎಂದು ಬಾಲಕನ ಕುಟುಂಬವು ಧಾರ್ಮಿಕ ಮತಾಂತರದ ಆರೋಪ ಮಾಡಿದೆ. ಈ ಘಟನೆ ಕಾಕದೇವ್ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ ಘಟನೆ ಸಂಬಂಧ ಮಹಿಳೆ, ಅವಳ ತಾಯಿ ಮತ್ತು ನಿಖಾ ನಿರ್ವಹಿಸಿದ ಮೌಲ್ವಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯನ್ನು ಏರ್ಪಡಿಸಿದ ಮಹಿಳೆಯ ಚಿಕ್ಕಮ್ಮನನ್ನು ಇನ್ನೂ ಬಂಧಿಸಲಾಗಿಲ್ಲ ಮತ್ತು ಅವಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.

ಅಪ್ರಾಪ್ತನ ಮದುವೆ ಮತ್ತು ಧಾರ್ಮಿಕ ಮತಾಂತರದ ವೀಡಿಯೊ ಬೆಳಕಿಗೆ ಬಂದ ನಂತರ, ಬಜರಂಗದಳದ ಕಾರ್ಯಕರ್ತರು ಕಾಕದೇವ್ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದರು. ಪೊಲೀಸರು ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!