Monday, April 29, 2024
spot_imgspot_img
spot_imgspot_img

ವೈದ್ಯರ ಎಡವಟ್ಟಿನಿಂದ  ರಾಜಸ್ಥಾನದಲ್ಲಿ 18 ಜನರ ದೃಷ್ಟಿಯೇ ಕಳೆದುಕೊಂಡಿದ್ದಾರೆ

- Advertisement -G L Acharya panikkar
- Advertisement -

ರಾಜಸ್ಥಾನದ ಅತಿದೊಡ್ಡ ಸರ್ಕಾರಿ ಆಸ್ಪತ್ರೆ ಸವಾಯಿ ಮಾನ್ ಸಿಂಗ್​ನಲ್ಲಿ ವೈದ್ಯರ ಬೇಜಾವಬ್ದಾರಿಯಿಂದ 18 ಜನ ದೃಷ್ಟಿ ಕಳೆದುಕೊಂಡಿದ್ದಾರೆ.
ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗೆ ಒಳಗಾದ 18 ಜನರು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇವರಲ್ಲಿ ಹೆಚ್ಚಿನವರಿಗೆ ರಾಜಸ್ಥಾನ ಸರ್ಕಾರದ ಚಿರಂಜೀವಿ ಆರೋಗ್ಯ ಯೋಜನೆಯಡಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಜೂನ್ 23ರಂದು ಆಪರೇಷನ್ ಮಾಡಲಾಗಿದ್ದು, ಜುಲೈ 5ರ ವರೆಗೆ ಎಲ್ಲವೂ ಸರಿಯಾಗಿ ಕಾಣಿಸುತ್ತಿತ್ತು, ಆದರೆ ಮರುದಿನ  ಜುಲೈ 6, 7ರಿಂದ ಯಾವುದೇ ವಸ್ತುಗಳನ್ನು ಸರಿಯಾಗಿ ಗುರುತಿಸಲಾಗುತ್ತಿರಲಿಲ್ಲ, ಈ ಬಗ್ಗೆ ಅಲ್ಲಿನ ವೈದ್ಯರಿಗೆ ಹೇಳಿದಾಗ ಮತ್ತೆ ಆಪರೇಷನ್ ಮಾಡಿದ್ದಾರೆ, ಅದರೂ ದೃಷ್ಟಿ ಬರಲಿಲ್ಲ ಎಂದು ರೋಗಿಯೊಬ್ಬರು ಹೇಳಿದ್ದಾರೆ.
ಇವರು ದೃಷ್ಟಿ ಕಳೆದುಕೊಳ್ಳಲು ಸೋಂಕು ಕಾರಣ ಎಂದು ವೈದ್ಯರು ತಿಳಿಸಿದ್ದು, ಸೋಂಕನ್ನು ಗುಣಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಆಪರೇಷನ್ ಮಾಡಿದ ನಂತರ ಕಣ್ಣು ನೋವು ಬಂದಿದೆ, ಈ ಬಗ್ಗೆ ರೋಗಿಗಳು ವೈದ್ಯರಿಗೆ ದೂರು ನೀಡಿದಾಗ, ವೈದ್ಯರು ಮತ್ತೆ ಆಸ್ಪತ್ರೆಗೆ ದಾಖಲಾಗುವಂತೆ ಕೇಳಿಕೊಂಡಿದ್ದಾರೆ. ಈ ರೋಗಿಗಳು ಮತ್ತೆ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.
ಆದರೆ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದ ಅಧಿಕಾರಿಗಳು ನಮ್ಮ ಕಡೆಯಿಂದ ಯಾವುದೇ ಲೋಪವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ ಮತ್ತು ರೋಗಿಗಳಿಂದ ದೂರುಗಳನ್ನು ಸ್ವೀಕರಿಸಿದ ನಂತರ ತನಿಖೆ ನಡೆಸಲಾಗುತ್ತಿಲ್ಲ ಎಂದು ಹೇಳಿದ್ದಾರೆ.

- Advertisement -

Related news

error: Content is protected !!