Sunday, June 21, 2026
spot_imgspot_img
spot_imgspot_img

ಸುಳ್ಯ: ಹಾಡುಹಗಲೇ ಮನೆಗೆ ನುಗ್ಗಿ ಕಳ್ಳತನ- ನಗ ನಗದು ಕಳವು

- Advertisement -
- Advertisement -

ಸುಳ್ಯ: ಯಾರೂ ಇಲ್ಲದ ಸಂದರ್ಭ ಬಳಸಿ, ಹಾಡುಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಸಹಿತ ಹಣ ಕಳ್ಳತನ ನಡೆಸಿದ ಘಟನೆ ಸಂಪಾಜೆಯ ಬೈಲಿನಲ್ಲಿ ಫೆ.08 ರಂದು ನಡೆದಿದೆ.

ಸಂಪಾಜೆ ಬೈಲಿನ ಕನ್ಯಾನ ವಿಜಯ ಎಂಬವರ ಮನೆಗೆ ಕಳ್ಳರು ನುಗ್ಗಿ ಕಳ್ಳತನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅವರು ಬೆಳಿಗ್ಗೆ ಕಲ್ಲುಗುಂಡಿಯ ತಮ್ಮ ಅಂಗಡಿಗೆ ಹೋಗಿ ಸಂಜೆ ವೇಳೆ ಮನೆಗೆ ಹಿಂದಿರುಗಿ ನೋಡಿದಾಗ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿತ್ತು. ಕೂಡಲೇ ಸ್ಥಳೀಯರಿಗೆ ವಿಷಯ ತಿಳಿಸಲಾಗಿದ್ದು, ಸಂಪಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮನೆಯಲ್ಲಿದ್ದ 40 ಗ್ರಾಂ ಚಿನ್ನಾಭರಣ ಮತ್ತು 20ಸಾವಿರ ಮೌಲ್ಯದ ಹಣ ಕಳ್ಳತನವಾಗಿದೆ. ಸ್ಥಳಕ್ಕೆ ಮಡಿಕೇರಿ ಪೊಲೀಸ್ ಸಿಬ್ಬಂದಿ , ಬೆರಳಚ್ಚು ತಜ್ಞರು , ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಲಾಗಿದೆ

- Advertisement -

Related news

error: Content is protected !!