Tuesday, April 16, 2024
spot_imgspot_img
spot_imgspot_img

180 ಮಿಲಿಯನ್​ ವರ್ಷಗಳಷ್ಟು ಹಳೆಯ ಸೀ ಡ್ರ್ಯಾಗನ್​ ಪಳೆಯುಳಿಕೆ ಪತ್ತೆ..!

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla

180 ಮಿಲಿಯನ್​ ವರ್ಷಗಳಷ್ಟು ಹಳೆಯ ಸಮುದ್ರ ಡ್ರ್ಯಾಗ​ನ್​ ಪಳಯುಳಿಕೆಯನ್ನು ಯುಕೆ ವಿಜ್ಞಾನಿಗಳ ತಂಡ ಪತ್ತೆಮಾಡಿದ್ದಾರೆ. ಇದು ಬ್ರಿಟಿಷ್​ ಪ್ರಾಗ್ಜೀವಶಾಸ್ತ್ರ ಇತಿಹಾದಲ್ಲೇ ಅಪರೂಪದ ಉತ್ಖನನವಾಗಿದೆ.

10 ಮೀ. ಉದ್ದದ ಪಳೆಯುಳಿಕೆ ಪತ್ತೆಯಾಗಿದ್ದು 2-ಮೀಟರ್ ತಲೆಬುರುಡೆ ಮತ್ತು ಸುತ್ತಮುತ್ತಲಿನ ಜೇಡಿಮಣ್ಣನ್ನು ಹೊಂದಿರುವ ಬ್ಲಾಕ್ ಮಾತ್ರ ಒಂದು ಟನ್ ತೂಕವಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದು ಬ್ರಿಟನ್​ನಲ್ಲಿ ದೊರಕಿದ ಅತಿ ದೊಡ್ಡ ಪಳೆಯುಳಿಕೆಯಾಗಿದೆ ಎಂದು ವರದಿ ತಿಳಿಸಿದೆ.

2021 ರ ಫೆಬ್ರವರಿಯಲ್ಲಿ ರುಟ್‌ಲ್ಯಾಂಡ್ ವೈಲ್ಡ್‌ಲೈಫ್ ಟ್ರಸ್ಟ್‌ನ ಜೋ ಡೇವಿಸ್ ಯುಕೆಯ ರುಟ್‌ಲ್ಯಾಂಡ್ ವಾಟರ್ ಜಲಾಶಯದಲ್ಲಿ ಆವೃತವಾದ ದ್ವೀಪದ ನೀರನ್ನು ಬರಿದಾಗಿಸುವ ಸಮಯದಲ್ಲಿ ಈ ಅತಿದೊಡ್ಡ ಪಳೆಯುಳಿಕೆಯನ್ನು ಪತ್ತೆ ಮಾಡಿದ್ದಾರೆ. ಈ ಪ್ರಾಣಿಗಳು ಸುಮಾರು 250 ವರ್ಷಗಳ ಹಿಂದೆ ಕಾಣಸಿಗುತ್ತಿದ್ದವು.

ಆದರೆ ಕಳೆದ 90 ವರ್ಷಗಳಿಂದ ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಗೆ ಈ ಸೀ ಡ್ರ್ಯಾಗನ್​ಗಳು ಸೇರಿಕೊಂಡಿವೆ. ಡಾಲ್ಫಿನ್​ ಶರೀರವನ್ನು ಹೋಲುವ ಈ ಜೀವಿಗಳು 1 ರಿಂದ 25 ಮೀಟರ್​ಗಳಷ್ಟು ಉದ್ದ ಗಾತ್ರದಲ್ಲಿ ಬದಲಾವಣೆಯನ್ನು ಹೊಂದುತ್ತವೆ. ಇವುಗಳ ದೊಡ್ಡದಾದ ಹಲ್ಲು ಮತ್ತು ಕಣ್ಣುಗಳ ಕಾರಣದಿಂದ ಸಮುದ್ರ ಡ್ರ್ಯಾಗನ್​ ಎಂದು ಕರೆಯುತ್ತಾರೆ.

1970 ರಲ್ಲಿ ಇದೇ ರೀತಿಯ ಸೀ ಡ್ರ್ಯಾಗನ್​ ಪಳಯುಳಿಕೆಯನ್ನು ಪತ್ತೆ ಮಾಡಿದ್ದರು. ಆದರೆ ಇಷ್ಟು ದೊಡ್ಡ ಗಾತ್ರದ ಪಳೆಯುಳಿಕೆ ಇದೇ ಮೊದಲ ಬಾರಿಗೆ ದೊರಕಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಉತ್ಖನನ ಮಾಡಿದ ಸಮುದ್ರ ಡ್ರ್ಯಾಗನ್​ ಜತೆಗಿನ ಪೋಟೋವನ್ನು ಹಂಚಿಕೊಂಡಿದ್ದಾರೆ.

suvarna gold
- Advertisement -

Related news

error: Content is protected !!