Wednesday, July 2, 2025
spot_imgspot_img
spot_imgspot_img

19 ಕೋಟಿ ಆಸ್ತಿಗಾಗಿ ಸತ್ತ ವ್ಯಕ್ತಿಯನ್ನೇ ಮದುವೆಯಾದಂತೆ ನಕಲಿ ದಾಖಲೆ ಸೃಷ್ಟಿಸಿದ ಮಹಿಳೆ; ಮೂವರ ಬಂಧನ..!

- Advertisement -
- Advertisement -

ಸತ್ತ ವ್ಯಕ್ತಿಯ 19 ಕೋಟಿ ಮೌಲ್ಯದ ಆಸ್ತಿಯನ್ನು ತನ್ನದಾಗಿಸಿಕೊಳ್ಳಲು ಮಹಿಳೆಯೊಬ್ಬಳು ಸತ್ತ ವ್ಯಕ್ತಿಯನ್ನೇ ಮದುವೆಯಾದಂತೆ ನಕಲಿ ದಾಖಲೆ ಸೃಷ್ಟಿಸಿ ಸಿಕ್ಕಿ ಬಿದ್ದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಂಜಲಿ ಬಾರ್‌ಗೆ ಬರುತ್ತಿದ್ದ ಶ್ರೀಮಂತ ವ್ಯಕ್ತಿಯ ಪರಿಚಯ ಮಾಡಿಕೊಂಡಿದ್ದಳು.

ಆತನ ಸ್ನೇಹ ಬೆಳೆಸಿ ತನ್ನ ಬಲೆಗೆ ಬೀಳಿಸಿದ್ದಳು. ಈ ಮಧ್ಯೆ ಆ ವ್ಯಕ್ತಿ ಮೃತಪಟ್ಟಿದ್ದ ಇದರಿಂದ ಆತನ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ಅಂಜಲಿಯ ತಂತ್ರ ಕೈಕೊಟ್ಟಿತ್ತು.

ಇದರಿಂದ ಆತನ ಜತೆ ತಾನು ಮದುವೆಯಾದಂತೆ ನಕಲಿ ಮ್ಯಾರೇಜ್ ಸರ್ಟಿಫಿಕೇಟ್ ಸೃಷ್ಟಿಸಿದ್ದಾಳೆ. ಇದಕ್ಕೆ ಪಾದ್ರಿ ಥಾಮಸ್ ರಾಮುಲ್ ಗೋಡ್ರವಾರ್ ಮತ್ತು ಮಹೇಶ್ ಕಾಟ್ಕರ್ ಎಂಬವರನ್ನು ಬಳಸಿಕೊಂಡಿದ್ದಳು.

ತನ್ನ ಗಂಡ ಸತ್ತುಹೋಗಿದ್ದು, ಆತನ ಆಸ್ತಿಗೆ ತಾನೇ ಒಡತಿ ಎಂದು ಮೃತ ವ್ಯಕ್ತಿಯ 19.70 ಕೋಟಿ ಮೌಲ್ಯದ ಆಸ್ತಿಯನ್ನು ಮಹಿಳೆ ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಾಳೆ. ವಿಚಾರ ಗೊತ್ತಾಗಿ ಈ ಕುರಿತು ಮೃತನ ತಾಯಿ ನೌಪಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಇನ್ಸ್ಪೆಕ್ಟರ್ ಮಾಲೋಜಿ ಶಿಂಧೆ, ಈ ಬಗ್ಗೆ ತನಿಖೆ ನಡೆಸಿದಾಗ ಮೋಸದಾಟ ಬಯಲಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಜಲಿ ಅಗರ್ವಾಲ್ (30), ಥಾಮಸ್ ರಾಮುಲ್ ಗೋಡವಾ‌ (50) ಮತ್ತು ಮಹೇಶ್ ಕಾಟ್ಕರ್ (37) ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Related news

error: Content is protected !!