Friday, April 26, 2024
spot_imgspot_img
spot_imgspot_img

ಕುಡಿಯುವ ನೀರಿನ ದುರ್ಬಳಕೆ ಮಾಡಿದರೆ 1 ಲಕ್ಷ ರೂ.ವರೆಗೆ ದಂಡ ಮತ್ತು ಐದು ವರ್ಷ ಜೈಲು

- Advertisement -G L Acharya panikkar
- Advertisement -

ನವದೆಹಲಿ: ಕುಡಿಯುವ ನೀರಿನ ದುರ್ಬಳಕೆ ಮಾಡಿದರೆ 1 ಲಕ್ಷ ರೂ.ವರೆಗೆ ದಂಡ ಮತ್ತು ಐದು ವರ್ಷ ಜೈಲು ಶಿಕ್ಷೆಯಾಗಲಿದೆ ಎಂದು ಕೇಂದ್ರ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ.

ಜಲ ಶಕ್ತಿ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಅಂತರ್ಜಲ ಪ್ರಾಧಿಕಾರ , 1986ರ ಪರಿಸರ ರಕ್ಷಣೆ ಕಾಯ್ದೆ 5ರ ಅಡಿಯಲ್ಲಿ ಈ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯನ್ನ ಪಾಲಿಸದಿದ್ದರೆ, ಪ್ರತಿ ಬಾರಿ ಉಲ್ಲಂಘನೆಯ ಪ್ರಕರಣದಲ್ಲೂ ಐದು ವರ್ಷ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದು. ಅದೇ ರೀತಿ ಉಲ್ಲಂಘನೆ ಮುಂದುವರಿದರೆ, ಪರಿಸರ ರಕ್ಷಣೆ ಕಾಯಿದೆ 1986ರ ಸೆಕ್ಷನ್ 15ರ ಅಡಿಯಲ್ಲಿ, ದಂಡದ ಮೊತ್ತವಾಗಿ ಪ್ರತಿ ದಿನ ಐದು ಸಾವಿರ ರೂಪಾಯಿವರೆಗೆ ನೀಡಬೇಕಾಗುತ್ತೆ’ ಎಂದು ಪ್ರಕರಣದ ವಕೀಲ ಆಕಾಶ್ ವಶಿಷ್ಠ ಅವರು ಹೇಳಿದ್ದಾರೆ.

ನೀರು ಸರಬರಾಜು ಮಾಡುವ ನಾಗರಿಕ ಸಂಸ್ಥೆಗಳು ಕಡ್ಡಾಯವಾಗಿ ಅಂತರ್ಜಲದಿಂದ ನೀರು ಪೋಲಾಗದಂತೆ ನಿಗಾ ವಹಿಸಬೇಕು. ದೇಶದ ಯಾವುದೇ ವ್ಯಕ್ತಿ ಭೂಗತವಾಗಿ ಬಳಸುವ ಜಲಸಂಪನ್ಮೂಲಗಳನ್ನ ವ್ಯರ್ಥ ಮಾಡುವಂತಿಲ್ಲ ಎಂದು ಆದೇಶದಲ್ಲಿ ಹೇಳಿದೆ.

- Advertisement -

Related news

error: Content is protected !!