Sunday, May 5, 2024
spot_imgspot_img
spot_imgspot_img

2ನೇ ಮಹಾಯುದ್ಧದಲ್ಲಿ ಹೋರಾಡಿದ್ದ ಯೋಧ ವಿಟ್ಲ ಕೂಟೇಲು ಜೋಸೆಫ್ ಮೈಕಲ್ ವೇಗಸ್ ನಿಧನ

- Advertisement -G L Acharya panikkar
- Advertisement -

ವಿಟ್ಲ :1945ರಲ್ಲಿ ನಡೆದ ಮಹಾಯುದ್ಧದಲ್ಲಿ ಹೋರಾಡಿದ್ದ ಶತಾಯಿಶಿ ವಿಟ್ಲದ ಕೂಟೇಲು ನಿವಾಸಿ ಜೋಸೆಫ್ ಮೈಕಲ್ ವೇಗಸ್(102ವ.) ಜು.7ರಂದು ನಿಧನರಾದರು.

ಇಂತ್ರು ವೇಗಸ್ ಮತ್ತು ಅಂಜಲಿ ವೇಗಸ್ ದಂಪತಿ ಪುತ್ರರಾಗಿರುವ ಜೋಸೆಫ್ ಮೈಕಲ್ ವೇಗಸ್‌ರವರು 1944 ರಲ್ಲಿ ಭಾರತೀಯ ಸೇನೆಗೆ ನೇಮಕಗೊಂಡಿದ್ದರು. ಸೇನೆಯಲ್ಲಿ ಲ್ಯಾನ್ಸ್ ನಾಯಕ್ ಹುದ್ದೆ ಪಡೆದಿರುವ ಇವರು 1945ರಲ್ಲಿ ನಡೆದ ಮಹಾಯುದ್ಧದಲ್ಲಿ ಇರಾನ್, ಇರಾಕ್, ಬಗ್ದಾದ್, ರಾಂಚಿ, ಪಂಜಾಬ್, ಡೆಹ್ರಾಡೂನ್‌ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 1952ರಲ್ಲಿ ಸ್ವಯಂ ನಿವೃತ್ತಿ ಪಡೆದ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಫ್ಲೋರಿನ್ ಡಿ ಸೋಜ ಹಾಗೂ ೧೧ ಮಂದಿ ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ಅಂತ್ಯಕ್ರಿಯೆ ಮೃತರ ಮನೆಯಲ್ಲಿ ಜು.9ರಂದು ಅಂತಿಮ ವಿಧಿ ವಿಧಾನದ ಬಳಿಕ ಸಂಜೆ 3.45ಕ್ಕೆ ಕೂಟೇಲು ಮನೆಯಿಂದ ವಿಟ್ಲ ಚರ್ಚ್‌ನಲ್ಲಿ ತನಕ ಅಂತಿಮ ಯಾತ್ರೆ ನಡೆದು ಬಳಿಕ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಮೃತರ ಮನೆಯವರು ತಿಳಿಸಿದ್ದಾರೆ.

- Advertisement -

Related news

error: Content is protected !!