Friday, June 5, 2026
spot_imgspot_img
spot_imgspot_img

ಉಡುಪಿ :ಅಪ್ರಾಪ್ತೆಯ ಅರೆನಗ್ನ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಕಠಿಣ ಸಜೆ

- Advertisement -
- Advertisement -

ಉಡುಪಿ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಆಕೆಯ ಅರೆನಗ್ನಗೊಳಿಸಿ ವಿಡಿಯೋ ಚಿತ್ರೀಕರಣ ಮಾಡಿದಲ್ಲದೆ ಬ್ಲ್ಯಾಕ್ ಮೇಲ್ ನೆಪದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಉಡುಪಿ ಜಿಲ್ಲಾ ಪೋಕ್ಸೋ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ, 62 ಸಾವಿರ ರೂಪಾಯಿ ದಂಡ ವಿಧಿಸಿದೆ. ಮಜೂರು ನಿವಾಸಿ ಶಂಶುದ್ದೀನ್ (24) ಶಿಕ್ಷೆಗೆ ಗುರಿಯಾದ ಆರೋಪಿ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಜೂರು ಗ್ರಾಮದ ನಿವಾಸಿಯಾಗಿರುವ ಆರೋಪಿ, ಪ್ರತಿ ದಿನ ಬಾಲಕಿಯನ್ನು ತನ್ನ ಆಟೋದಲ್ಲಿ ಶಾಲೆಗೆ ಬಿಡುತಿದ್ದ. ಆಟೋದಲ್ಲಿ ಶಾಲೆಗೆ ಬಿಡ್ತಿದ್ದ ವೇಳೆ ಒತ್ತಾಯ ಪೂರ್ವಕವಾಗಿ ಬಾಲಕಿಯ ಫೋಟೋ, ವಿಡಿಯೋ ಮಾಡಿ ವೈರಲ್ ಮಾಡುವುದಾಗಿ ಬೆದರಿಸಿದ್ದ. ನನ್ನ ಜೊತೆ ಬಂದರೆ ವಿಡಿಯೋ ಡಿಲೀಟ್ ಮಾಡುವುದಾಗಿ ನಂಬಿಸಿದ್ದ. ಆರೋಪಿಯ ಮಾತುಗಳನ್ನು ನಂಬಿದ ಬಾಲಕಿ ಆತನ ಜೊತೆ ಬರಲು ಒಪ್ಪಿಕೊಂಡಿಳು. ಆಗ ಆರೋಪಿ ಬಾಲಕಿಯನ್ನು ಲಾಡ್ಜ್, ರೆಸಾರ್ಟ್ ಗೆ ಕರೆದುಕೊಂಡು ಹೋಗಿ ನಿರಂತರ ಅತ್ಯಾಚಾರ ಎಸಗಿದ್ದಾನೆ.

ಮತ್ತೆ ಕರೆದಾಗ ಬಾಲಕಿ ಹೋಗಲು ನಿರಾಕರಿಸಿದಕ್ಕೆ ಅರೆನಗ್ನ ವಿಡಿಯೋವನ್ನು ತಾಯಿಗೆ ಕಳುಹಿಸಿದ್ದಾನೆ. ಬಾಲಕಿಯ ವಿಡಿಯೋ ತಾಯಿಯ ಮೊಬೈಲ್‌ಗೆ ಕಳುಹಿಸಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ನೊಂದ ಬಾಲಕಿಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಾಪು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸದ್ಯ ಆರೋಪಿಗೆ ಕಠಿಣ ಶಿಕ್ಷೆ ಸಿಕ್ಕಿದೆ.

- Advertisement -

Related news

error: Content is protected !!