Friday, May 3, 2024
spot_imgspot_img
spot_imgspot_img

₹2000 ನೋಟು ಇನ್ನು ಕೇವಲ ಬೆರಳೆಣಿಕೆಯಷ್ಟೇ ದಿನ ಚಾಲ್ತಿಯಲ್ಲಿರುತ್ತದೆ.

- Advertisement -G L Acharya panikkar
- Advertisement -

ರಿಸರ್ವ್ ಬ್ಯಾಂಪ್ ಆಫ್ ಇಂಡಿಯಾ (ಆರ್‌ಬಿಐ) ಮೇ 19 ರಂದು 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ನೋಟುಗಳನ್ನು ಬದಲಾಯಿಸಿಕೊಳ್ಳಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಗಡುವು ಮುಗಿಯಲು ಕೆಲವೇ ಮೂರು ದಿನಗಳು ಉಳಿದಿವೆ.

ಈ ಗಡುವಿಗೂ ಮುನ್ನವೇ ನೀವು ನೋಟುಗಳನ್ನು ಬದಲಾವಣೆ ಮಾಡಬೇಕಾಗುತ್ತದೆ.2000 ರೂಪಾಯಿ ನೋಟುಗಳನ್ನು ಜನರು ಸೆಪ್ಟೆಂಬರ್ 30 ರೊಳಗೆ ಬ್ಯಾಂಕ್‌ಗಳಲ್ಲಿ ಡೆಪಾಸಿಟ್ ಮಾಡುವಂತೆ ಅಥವಾ ಬದಲಾವಣೆ ಮಾಡಿಕೊಳ್ಳುವಂತೆ ಕೇಂದ್ರ ಬ್ಯಾಂಕ್ ವಿನಂತಿ ಮಾಡಿದೆ.
ಜನರು ಸೆಪ್ಟೆಂಬರ್ 30 ರವರೆಗೆ ತಮ್ಮ ಬ್ಯಾಂಕ್ ಖಾತೆಗಳಲ್ಲಿ 2,000 ರೂಪಾಯಿ ನೋಟುಗಳನ್ನು ಡೆಪಾಸಿಟ್ ಮಾಡಬಹುದು ಅಥವಾ ಬದಲಾವಣೆ ಮಾಡಿಕೊಳ್ಳಬಹುದು.

ಬ್ಯಾಂಕ್ ಶಾಖೆಗಳ ನಿಯಮಿತ ಕಾರ್ಯನಿರ್ವಹಣೆಯಲ್ಲಿ ಅಡಚಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಒಂದು ಬಾರಿಗೆ 20,000 ರೂಪಾಯಿ ಮೌಲ್ಯದ 2000 ರೂಪಾಯಿಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. 2000 ರೂಪಾಯಿ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲು ಕೆವೈಸಿ ಮಾನದಂಡಗಳು ಹಾಗೂ ಇತರೆ ಕಾನೂನು ಪ್ರಕ್ರಿಯೆಗಳು ಅವಶ್ಯಕವಾಗಿದೆ.

- Advertisement -

Related news

error: Content is protected !!