Thursday, October 10, 2024
spot_imgspot_img
spot_imgspot_img

ವಿಟ್ಲ : ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿ , ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘ ಹಾಗೂ ಶ್ರೀವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ ಇದರ ಸಹಯೋಗದಲ್ಲಿ 22ನೇ ವರ್ಷದ ಮೊಸರು ಕುಡಿಕೆ ಉತ್ಸವ

- Advertisement -
- Advertisement -

ವಿಟ್ಲ : ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿ , ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘ ಹಾಗೂ ಶ್ರೀವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ ಇದರ ಸಹಯೋಗದಲ್ಲಿ 22ನೇ ವರ್ಷದ ಮೊಸರು ಕುಡಿಕೆ ಉತ್ಸವವು ಪೂರ್ಲಪ್ಪಾಡಿ ಅಂಗನವಾಡಿ ಕೇಂದ್ರದ ವಠಾರದಲ್ಲಿ ನಡೆಯಿತು.

ಗೌರವಾಧ್ಯಕ್ಷರಾದ ಈಶ್ವರ್ ಭಟ್ ಪೂರ್ಲಪ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಅನಂತರ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.

ಸಂಜೆ ಬಹುಮಾನ ವಿತರಣಾ ಸಮಾರಂಭ ವಿಟ್ಲ ಪಡ್ನೂರು ಗ್ರಾಮ ಪಂಚಾಯತು ಅಧ್ಯಕ್ಷರಾದ ಜಯಂತ್ ಪೂರ್ಲಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು .
ಈ ಸಂದರ್ಭದಲ್ಲಿ ಅತಿಥಿಗಳಾಗಿ ಗ್ರಾಮ ಪಂ. ಮಾಜಿ ಅಧ್ಯಕ್ಷರಾದ ರವೀಶ್ ಶೆಟ್ಟಿ ಕರ್ಕಳ, ವಿಠ್ಠಲ್ ಜೇಸೀಸ್ ಆಂಗ್ಲ ಮಾದ್ಯಮ ಶಾಲೆ ವಿಟ್ಲ ಇದರ ಆಡಳಿತಾಧಿಕಾರಿ ರಾದಾಕೃಷ್ಣ ಎರುಂಬು, MRPL
ಮಂಗಳೂರು ಇದರ ಗುಣನಿಯಂತ್ರಣಾಧಿಕಾರಿ ಶ್ರೀಕೃಷ್ಣ ಬದನಾಜೆ, ದ.ಕ.ಜಿ.ಪಂ.ಹಿ ಪ್ರಾ ಶಾಲೆ ಚಂದಳಿಕೆ ಮುಖ್ಯೋಪಾಧ್ಯಾಯರಾದ ವಿಶ್ವನಾಥ ಗೌಡ ಕುಳಾಲು, ಹವ್ಯಾಸಿ ಯಕ್ಷಗಾನ ಅರ್ಥದಾರಿಗಳಾದ ಜಗದೀಶ ರೈ ಪನಡ್ಕ , ಮಲರಾಯಿ ದ್ಯವಸ್ಥಾನ ಆಡಳಿತ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ವಕೀಲರು ನೋಟರಿ ರಾಮಣ್ಣ ಗೌಡ ದೇವರಮನೆ, ಶಿಲ್ಪಶ್ರೀ ಯುವಕ ಮಂಡಲದ ಅಧ್ಯಕ್ಷರಾದ ರೋಹಿತ್ ರೈ ಚೆಂಬರಡ್ಕ, ಸಮಿತಿ ಅಧ್ಯಕ್ಷ ವಿಜಯ ಅಡ್ಯಾಡಿ, ಗ್ರಾಮ ಪಂ. ಸದಸ್ಯೆ ಜಯಲಕ್ಷ್ಮಿ ಕೆ, ಶ್ರೀವರ ಯುವಕ ಮಂಡಲ ಅಧ್ಯಕ್ಷ ಸೋಮನಾಥ ಗೌಡ ಭಾಗವಹಿಸಿದ್ದರು.

ಹತ್ತನೇ ಮತ್ತು ದ್ವಿತೀಯ ಪಿಯುಸಿ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಮತ್ತು ಸ್ಥಳೀಯ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ಶಾರದಾ ಸುದಾಕರ ಸೇಮಿತ ರವರನ್ನು ಈ ಸಂದರ್ಭದಲ್ಲಿ ಸಮಿತಿಯಿಂದ ಸನ್ಮಾನಿಸಲಾಯಿತು.

ಮಾಲವಿ ಯತೀಶ್ ಪ್ರಾರ್ಥಿಸಿದರು. ಕುಮಾರಿ ಶೀತಲ್ ಪಿ ಜೆ ದೇವರಮನೆ ಸ್ವಾಗತಿಸಿದರು. ದೇವಿಪ್ರಸಾದ್ , ಕಿರಣ್ ಚಂದ್ರ ಆಳ್ವ,ಸಂತೋಷ್ ಪಿ, ಯೋಗೀಶ್ ಪಿ , ವಿಶಾಕ್ ಕೆ, ಪ್ರಜೇಶ್ ಕೆ, ಚೇತನ್ ಕುಮಾರ್ ಪಿ ಕೆ, ಪ್ರಶಾಂತ್ ಪಿ, ಲೋಕೇಶ್ ಕೆ, ಶಿವರಾಜ್ ಪಿ, ಮನೋಜ್ ಪಿ ಡಿ, ಕಮಲ ಡಿ, ಶೀಲಾ ಸೇಸಪ್ಪ ಗೌಡ, ಪ್ರಮೀಳಾ ಜಿನ್ನಪ್ಪ ಪೂಜಾರಿ ಬಹುಮಾನ ವಿತರಣೆಯಲ್ಲಿ ಸಹಕರಿಸಿದರು.

ಯತೀಶ್ ಪಾಲೆತ್ತಡಿ ಸನ್ಮಾನ ಪತ್ರವನ್ನು ವಾಚಿಸಿದರು. ಹರೀಶ್ ವಿಟ್ಲ ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು. ಶ್ರೀವರ ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘದ ಸದಸ್ಯೆಯರು ಕಾರ್ಯಕ್ರಮದಲ್ಲಿ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಊರವರಿಂದ ವಿವಿಧ ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಕಿರು ನಾಟಕ ನಡೆಯಿತು.

- Advertisement -

Related news

error: Content is protected !!