
ಬೆಂಗಳೂರು:ಬಂಟರ ಸಂಘ (ರಿ) ಬೆಂಗಳೂರು ಇದರ ಕಾನೂನು ಘಟಕದ ನೂತನ ಪದಾಧಿಕಾರಿ ಆಯ್ಕೆ ನಡೆಯಿತು.
ನೂತನ ಅಧ್ಯಕ್ಷರಾದ ದೀಪಕ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಕಾನೂನು ಘಟಕದ ಪದಾಧಿಕಾರಿಗಳ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ಶ್ರೀಮತಿ ಶಕುಂತಲಾ ಶೆಟ್ಟಿ ಹಾಗೂ ಸಂಚಾಲಕರಾಗಿ ಶ್ರೀ ಜಯಪ್ರಕಾಶ್ ರೈ ಕನ್ನೆಜಾಲು ಇವರನ್ನು ಆಯ್ಕೆ ಮಾಡಲಾಯಿತು.
ಪೆರುವಾಜೆ ಗ್ರಾಮದ ಕನ್ನೆಜಾಲು ದಿ.ನಾರಾಯಣ ರೈ-ಶ್ರೀಮತಿ ಜಯಂತಿ ದಂಪತಿಗಳ ಪುತ್ರರಾದ ಜಯಪ್ರಕಾಶ್ ರೈಯವರು ಪ್ರಾಥಮಿ ವಿದ್ಯಾಭ್ಯಾಸವನ್ನು ಸ.ಹಿ.ಪ್ರಾಶಾಲೆ ಮುಕ್ಕೂರು ಪೆರುವಾಜೆಯಲ್ಲಿ ಪಡೆದರು. ಪ್ರೌಢ ಹಾಗೂ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಕೆಯ್ಯರು ಜೂನಿಯರ್ ಕಾಲೇಜಿನಲ್ಲಿ ಹಾಗೂ ಪದವಿ ವಿದ್ಯಾಭ್ಯಾಸವನ್ನು ಪೆರುವಾಜೆ ಡಾ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಡೆದು, ಸುಳ್ಯದ ಕೆವಿಜಿ ಕಾನೂನು ಕಾಲೇಜಿನಲ್ಲಿ ಕಾನೂನು ವಿದ್ಯಾಭ್ಯಾಸ ಪೂರ್ತಿಗೊಳಿಸಿದ್ದರು.ಬಳಿಕ ಸುಳ್ಯದ ನ್ಯಾಯವಾದಿ ನಾರಾಯಣ ಕೆ.ಯವರ ಜತೆ ವಕೀಲರ ವೃತ್ತಿ ಆರಂಭಿಸಿದ ಇವರು, 2010ರಿಂದ ಬೆಂಗಳೂರಿನಲ್ಲಿ ನ್ಯಾಯವಾದಿಯಾಗಿದ್ದಾರೆ.
ಪ್ರಸ್ತುತ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನೆಲೆಸಿರುವ ಇವರು ಯುವ ವಕೀಲರ ಸಂಘದ ರಾಜ್ಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕಾನೂನು ಘಟಕದ ಗೌರವ ಸದಸ್ಯರಾಗಿ ಶ್ರೀ ಗಂಗಾಧರ್ ಶೆಟ್ಟಿ,ಶ್ರೀ ಜೀವನ್ ರೈಕೆ,ಶ್ರೀ ನವೀನ್ ಚಂದ್ರ ಶೆಟ್ಟಿ,ಶ್ರೀ ವಿಪ್ಪೇಶ್ ಶೆಟ್ಟಿ,ಶ್ರೀ ನಿಶ್ಚಿತ್ ಶೆಟ್ಟಿ,ಶ್ರೀ ಪ್ರಸನ್ನ ಶೆಟ್ಟಿ,ಶುಭ ಆಳ್ವ ಅರ್ಚನಾ, ಸೀಮಾ,ಶ್ರೀ ಉದಯ್ ಶೆಟ್ಟಿ,ಶ್ರೀ ಜಯರಾಂ ಶೆಟ್ಟಿ ಶ್ರೀ ಸುರೇಖಾ ಶೆಟ್ಟಿ,ಶ್ರೀ ಸಂದೇಶ್ ಶೆಟ್ಟಿ,ಶ್ರೀ ದೀಪಕ್ ಶೆಟ್ಟಿ ಇವರನ್ನು ಆಯ್ಕೆ ಮಾಡಲಾಯಿತು.








