Thursday, March 28, 2024
spot_imgspot_img
spot_imgspot_img

*ಯುಜಿಸಿ ಪಟ್ಟಿಯಲ್ಲಿ 24 ನಕಲಿ ವಿಶ್ವವಿದ್ಯಾಲಯಗಳು- ಕರ್ನಾಟಕದಲ್ಲೂ ಒಂದು ಪೋಷಕರೇ ಎಚ್ಚರ!!!

- Advertisement -G L Acharya panikkar
- Advertisement -

ನವದೆಹಲಿ : ಮಾನ್ಯತೆ ಪಡೆಯದೆ ಕಾರ್ಯನಿರ್ವಹಿಸುತ್ತಿರುವ 24 ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಯುಜಿಸಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿರುವ ವಿಶ್ವವಿದ್ಯಾಲಯಗಳು ನಕಲಿಯಾಗಿದ್ದು, ಹೆಚ್ಚಿನವು ಉತ್ತರ ಪ್ರದೇಶ ಮತ್ತು ದೆಹಲಿಯಿಂದ ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದ ಬೆಳಗಾವಿಯಿಂದಲೂ ಒಂದು ಸ್ವಘೋಷಿತ ವಿವಿ ಅಸ್ತಿತ್ವದಲ್ಲಿರುವುದು ತಿಳಿದುಬಂದಿದೆ. ಬೆಳಗಾವಿಯ ಗೋಕಾಕ್​ನಲ್ಲಿ ಕಚೇರಿ ಹೊಂದಿರುವ ಬಡಾಗಾನವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಇಟಿ ಎಜಿಕೇಶನ್ ಸೊಸೈಟಿಯನ್ನು ಯುಜಿಸಿ ನಕಲಿ ಎಂದು ಗುರುತಿಸಿದೆ.

ಉತ್ತರ ಪ್ರದೇಶದಿಂದ ಎಂಟು, ದೆಹಲಿಯಿಂದ ಏಳು ವಿಶ್ವವಿದ್ಯಾಲಯಗಳು ನಕಲಿ ಆಗಿವೆ. ಪಶ್ಚಿಮ ಬಂಗಾಳ ಮತ್ತು ಒಡಿಶಾದಿಂದ ಎರಡು ವಿವಿ ಫೇಕ್ ಇವೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಪುದುಚೇರಿಯಿಂದ ತಲಾ ಒಂದೊಂದು ವಿವಿಗಳು ನಕಲಿ ಇವೆ. ಈ 24 ವಿಶ್ವ ವಿದ್ಯಾಲಯಗಳಲ್ಲಿ ಮಕ್ಕಳನ್ನ ಸೇರಿಸದಿರಿ. ಇವು ನೀಡುವ ಪದವಿ ಪ್ರಮಾಣ ಪತ್ರಕ್ಕೆ ಮಾನ್ಯತೆ ಇರುವುದಿಲ್ಲ. ನಿಮ್ಮ ಮಕ್ಕಳ ಓದಿನ ಶ್ರಮ ಮತ್ತು ಸಮಯವೆಲ್ಲವೂ ವ್ಯರ್ಥವಾದೀತು. ಯುಜಿಸಿ ಕಾಯ್ದೆ ಅಡಿ ನಿರ್ಧಾರಿತವಾದ ವಿಶ್ವವಿದ್ಯಾಲಯಗಳಿಂದ ಮಾತ್ರ ಪಡೆದ ಪದವಿಗಳಿಗೆ ಮಾನ್ಯತೆ ಇರುತ್ತದೆ. ಆದ್ದರಿಂದ ಪೋಷಕರೇ ಎಚ್ಚರ.

- Advertisement -

Related news

error: Content is protected !!