Monday, June 8, 2026
spot_imgspot_img
spot_imgspot_img

ನಕಲಿ ಚಿನ್ನ ಕೊಟ್ಟು 35 ಲಕ್ಷ ವಂಚನೆ; ಇಬ್ಬರು ಆರೋಪಿಗಳ ಬಂಧನ..!

- Advertisement -
- Advertisement -

ಚಿತ್ರದುರ್ಗ: ನಕಲಿ ಚಿನ್ನ ನೀಡಿ 35 ಲಕ್ಷ ರೂ. ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ದಾವಣಗೆರೆ ಮೂಲದ ರಮೇಶ್ ಹಾಗೂ ವಿಜಯನಗರ ಮೂಲದ ರಾಮಕೃಷ್ಣ ಎಂದು ಗುರುತಿಸಲಾಗಿದೆ.

ಇಬ್ಬರು ಸೇರಿ ತಮಿಳುನಾಡು ಮೂಲದ ಕೆ.ಪಾಂಡಿ ಎಂಬವರಿಗೆ 2ಕೆಜಿ ಚಿನ್ನ ಕೊಡುವುದಾಗಿ 35ಲಕ್ಷ ರೂ. ಪಡೆದು, ನಕಲಿ ಚಿನ್ನ ನೀಡಿ ವಂಚಿಸಿದ್ದರು. ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರಿಂದ 22ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.

- Advertisement -

Related news

error: Content is protected !!