Wednesday, July 22, 2026
spot_imgspot_img
spot_imgspot_img

ಡಾ.ಬಿ.ಆರ್.ಅಂಬೇಡ್ಕರ್ ಸರಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಮೂಲಭೂತ ಮೂಲಸೌಕರ್ಯಗಳ ಕೊರತೆ; ಹಾಸ್ಟೆಲ್ ವಿದ್ಯಾರ್ಥಿಗಳಿಂದ ಧರಣಿ

- Advertisement -
- Advertisement -

ಕನಕಗಿರಿ : ತಾವರಗೇರಾ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸರಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ರವಿವಾರ ಹಾಸ್ಟೆಲ್ ಮುಂಭಾಗ ಧರಣಿ ನಡೆಸಿದರು.

ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಬೋರ್‌ವೆಲ್ ನೀರು ಕುಡಿದು ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಶೌಚಾಲಯ, ಸ್ನಾನದ ಗೃಹಗಳು ದುರಸ್ತಿ ಕಾಣದೇ ಹಾಳಾಗಿವೆ. ಮೆನು ಪ್ರಕಾರ ಊಟ ಸಿಗುತ್ತಿಲ್ಲ. ಕಳಪೆ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿದೆ. ನಿರಂತರ ವಿದ್ಯುತ್ ಸಮಸ್ಯೆ, ರಾತ್ರಿ ವೇಳೆ ಓದಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ದಾಖಲಾತಿ ಪ್ರಕಾರ ಮಕ್ಕಳಿದ್ದರೂ, ಮಲಗಲು ಸರಿಯಾದ ಕೊಠಡಿ, ಹಾಸಿಗೆ ವ್ಯವಸ್ಥೆ ಇಲ್ಲ ಎಂದು ವಿದ್ಯಾರ್ಥಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಅವರಿಗೆ ಸಮಸ್ಯೆ ಹೇಳಿ ಅಳಲುತೊಡಿಕೊಂಡರು.

- Advertisement -

Related news

error: Content is protected !!