Friday, May 17, 2024
spot_imgspot_img
spot_imgspot_img

24,680 ಹಳ್ಳಿಗಳಿಗೆ 4G ಸೇವೆ ಒದಗಿಲು 26,316 ಕೋಟಿ ರೂ ಪ್ಯಾಕೇಜ್​ ಘೋಷಿಸಿದ ಕೇಂದ್ರ ಸರ್ಕಾರ

- Advertisement -G L Acharya panikkar
- Advertisement -

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಿನ್ನೆ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಒಟ್ಟು 26,316 ಕೋಟಿ ವೆಚ್ಚದಲ್ಲಿ 24,680 ಗುಡ್ಡಗಾಡು ಪ್ರದೇಶ ಹಾಗೂ ಹಳ್ಳಿಗಳಿಗೆ 4G ಸೇವೆ ಒದಗಿಸಲು ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಆರ್ಥಿಕವಾಗಿ ಸದೃಢವಾಗಿಸಲು 1.64 ಲಕ್ಷ ಕೋಟಿ ರೂ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

BSNL ಹಾಗೂ BBNL ವಿಲೀನಕ್ಕೆ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ

BSNL ಹಾಗೂ BBNL ವಿಲೀನಕ್ಕೆ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. BSNL ಪುನಶ್ಚೇತನಕ್ಕೆ ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಕೇಂದ್ರದ ಕ್ಯಾಬಿನೆಟ್ ಸಭೆಯ ಬಳಿಕ ಟೆಲಿಕಾಂ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ಬಿಎಸ್ಎನ್.ಎಲ್ ಸೇವೆ ಮೇಲ್ದರ್ಜೆಗೇರಿಸಲು , ಬ್ರಾಡ್ ಬ್ಯಾಂಡ್ ಸಂಪರ್ಕ ಸುಧಾರಿಸಲು ಪ್ಯಾಕೇಜ್ ಘೋಷಣೆ ಮಾಡಿದ್ದಾರೆ, ನಾಲ್ಕು ವರ್ಷಗಳ ಅವಧಿಗೆ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಎರಡು ವರ್ಷಗಳ ಬಳಿಕ ಪ್ಯಾಕೇಜ್ ಘೋಷಣೆಯ ಫಲಿತಾಂಶ ಲಭ್ಯ, 44 ಸಾವಿರ ಕೋಟಿ ರೂಪಾಯಿ ನಗದು ಪ್ಯಾಕೇಜ್ ಘೋಷಣೆ ಮಾಡಲಾಗಿದೆ.

BSNL ಗೆ 33 ಸಾವಿರ ಕೋಟಿ ರೂಪಾಯಿ ಬ್ಯಾಂಕ್ ಸಾಲ ಇದೆ. ಸಾವರಿನ್ ಗ್ಯಾರಂಟಿ ಬಾಂಡ್ ಮೂಲಕ ಹಣ ಸಂಗ್ರಹಿಸಿ ಸಾಲ ಮರುಪಾವತಿಗೆ ನಿರ್ಧರಿಸಲಾಗಿದೆ.

50 ಸಾವಿರ ಗ್ರಾಮಗಳಲ್ಲಿ ನೆಟ್ ವರ್ಕ್ ಸೌಲಭ್ಯ ಒದಗಿಸಲು 26,316 ಕೋಟಿ ರೂಪಾಯಿ ನೀಡಲು ಒಪ್ಪಿಗೆ ನೀಡಲಾಗಿದೆ. 50 ಸಾವಿರ ಗ್ರಾಮದಲ್ಲಿ ಟೆಲಿಕಾಂ ನೆಟ್ ವರ್ಕ್ ಸೌಲಭ್ಯ ಒದಗಿಸಲು ಹಣ ನೀಡಲು ಒಪ್ಪಿಗೆ ನೀಡಲಾಗಿದೆ.

BBNL- ಭಾರತ್ ಬ್ರಾಡ್ ಬ್ಯಾಂಡ್ ನೆಟ್ ವರ್ಕ್, MTNL ಅನ್ನು ಬಿಎಸ್ಎನ್ ಎಲ್ ನಿರ್ವಹಣೆ ಮಾಡಲಿದೆ. BSNL ಗೆ ತರಂಗಾಂತರ ಹಂಚಿಕೆ ಮಾಡುವ ಮೂಲಕ 4-G ಸೇವೆ ವಿಸ್ತರಣೆಗೆ ನೆರವು ನೀಡಲಾಗುತ್ತದೆ ಎಂದು ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 22 ರಂದು ಭಾರತವು ಮೊದಲ ಬಾರಿಗೆ ಅಂಡರ್​-17 ಮಹಿಳಾ ಫಿಫಾ ವಿಶ್ವಕಪ್ ಆಯೋಜಿಸುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ಅವರು ಅನುಮೋದನೆ ನೀಡಿದ್ದಾರೆ.

- Advertisement -

Related news

error: Content is protected !!