Monday, June 15, 2026
spot_imgspot_img
spot_imgspot_img

ಕೇಂದ್ರೀಯ ವಿದ್ಯಾಲಯ: 6ರಿಂದ 9ನೇ ತರಗತಿಯವರೆಗೆ ಸಂಸ್ಕೃತ ವಿಭಾಗ ಕಡ್ಡಾಯ

- Advertisement -
- Advertisement -

ನವದೆಹಲಿ: 2026-27ನೇ ಸಾಲಿನ ಶೈಕ್ಷಣಿಕವರ್ಷದ ತೃತೀಯ ಭಾಷಾ ಅನುಷ್ಠಾನದ ಚೌಕಟ್ಟಿನ ಅಡಿಯಲ್ಲಿ 6 ಹಾಗೂ 9ನೇ ತರಗತಿಯವರೆಗೆ ಮೂರನೇ ಭಾಷೆಯ ಭಾಗವಾಗಿ ಸಂಸ್ಕೃತದ ಒಂದು ವಿಭಾಗ ಇರುವುದನ್ನು ಕೇಂದ್ರೀಯ ವಿದ್ಯಾಲಯ ಸಂಘಟನೆ ಕಡ್ಡಾಯಗೊಳಿಸಿದೆ.

ಮೇ 29ರಂದು ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಪೋಷಕರು ಹಾಗೂ ಮಕ್ಕಳಿಂದ ತೃತೀಯ ಭಾಷೆಯ ಆಯ್ಕೆಯ ಚೌಕಟ್ಟನ್ನು ಪೂರ್ಣಗೊಳಿಸಿರಬೇಕು ಎಂದು ಶಿಕ್ಷಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯು ತಿಳಿಸಿದೆ.ಮೂರನೇ ಭಾಷೆಯಾಗಿ ಹಿಂದಿ ಅಥವಾ ಇಂಗ್ಲಿಷ್ ಹೊರತುಪಡಿಸಿ ಸಂಸ್ಕೃತ ಅಥವಾ ರಾಜ್ಯಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.“ವಿದ್ಯಾರ್ಥಿಗಳು ತಮ್ಮ ಆಯ್ಕೆಗೆ ತಕ್ಕಂತೆ ಸಂಸ್ಕೃತ ಅಥವಾ ಪ್ರಾದೇಶಿಕ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ವರ್ಗಾವಣೆ ಹೊಂದುವ ಉದ್ಯೋಗಿಗಳ ಮಕ್ಕಳ ಅನುಕೂಲಕ್ಕಾಗಿ ಪ್ರತಿ ಶಾಲೆಯಲ್ಲಿಯೂ ಒಂದು ಸಂಸ್ಕೃತ ವಿಭಾಗ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಶಾಲಾ ಮಟ್ಟದಲ್ಲಿ ಸಿಬ್ಬಂದಿಯನ್ನು ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆ ಮಾಡಲು ಅನುಕೂಲವಾಗುವಂತೆ, ಮೂರನೇ ಭಾಷೆಯಾಗಿ ಆಯ್ಕೆ ಮಾಡುವ ವಿದ್ಯಾರ್ಥಿಗಳು ಈ ಮಾಹಿತಿಯನ್ನು ‘ಸಮಾಗಮ್ ಪೋರ್ಟಲ್’ನಲ್ಲಿ ದಾಖಲಿಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

- Advertisement -

Related news

error: Content is protected !!