ಈ ಮೂರು ತಳಿಯ ನಾಯಿಗಳನ್ನು ಇನ್ನು ಮುಂದೆ ಸಾಕುವಂತಿಲ್ಲ; ಜೊತೆಗೆ ಬೇರೆ ನಿಯಮಗಳು ಜಾರಿಗೆ

0
952

ಸಾಕು ನಾಯಿಗಳೇ ಜನರ ಮೇಲೆ ದಾಳಿ ನಡೆಸುವಂತಹ ಘಟನೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಕೆಲವೊಂದು ತಳಿಗಳು ಮನೆಯವರ ಮೇಲೆ ಎರಗಿ ಜೀವಕ್ಕೆ ಆಪತ್ತು ತಂದಿಡುತ್ತದೆ. ಇದರಿಂದ ಚಿಂತೆಗೀಡಾದ ಆಡಳಿತ ತನ್ನ ನಿವಾಸಿಗಳಿಗೆ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ನಾಯಿಗಳನ್ನು ಸಾಕುವಂತಿಲ್ಲ ಎಂದಿದೆ. ಮಾತ್ರವಲ್ಲದೇ ಆಕ್ರಮಣಕಾರಿ ಸ್ವಭಾವವುಳ್ಳ ಮೂರು ತಳಿಯ ನಾಯಿಯನ್ನು ಸಾಕುವುದು ನಿಷೇಧಿಸಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್ ಆಡಳಿತ ತನ್ನ ನಿವಾಸಿಗಳಿಗೆ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ನಾಯಿಗಳನ್ನು ಸಾಕುವಂತಿಲ್ಲ ಎಂದಿದೆ. ಮಾತ್ರವಲ್ಲದೇ ಆಕ್ರಮಣಕಾರಿ ಸ್ವಭಾವವುಳ್ಳ ಪಿಟ್‌ಬುಲ್ ರಾಟ್‌ವೀಲರ್ ಹಾಗೂ ಡೋಗೊ ಅರ್ಜೆಂಟಿನೋ ತಳಿಗಳನ್ನು ಸಾಕುಪ್ರಾಣಿಗಳಾಗಿ ಇಟ್ಟುಕೊಳ್ಳುವುದನ್ನು ನಿಷೇಧಿಸಿದೆ.

ಸಾಕುಪ್ರಾಣಿ ಮಾಲೀಕರಿಗೆ ನವೆಂಬರ್ 1 ರಿಂದ ತಮ್ಮ ನಾಯಿಗಳಿಗೆ ಪರವಾನಗಿಯನ್ನು ನೀಡಲು ಪ್ರಾರಂಭಿಸಲಿದೆ. ಮಾಲೀಕರು 2 ತಿಂಗಳುಗಳೊಳಗೆ ತಮ್ಮ ನಾಯಿಗಳನ್ನು ನೋಂದಾಯಿಸಿಕೊಳ್ಳಬೇಕು. ಬಹುಮಹಡಿ ಕಟ್ಟಡದ ನಿವಾಸಿಗಳು ತಮ್ಮ ಸಾಕು ಪ್ರಾಣಿಗಳನ್ನು ಹೊರಗೆ ಕರೆಗೊಯ್ಯುವ ಸಂದರ್ಭ ಲಿಫ್ಟ್‌ಗಳನ್ನು ಬಳಸಬೇಕಾಗುತ್ತದೆ. ಮಾತ್ರವಲ್ಲದೇ ತಮ್ಮ ಸಾಕು ನಾಯಿಗಳನ್ನು ಸಾರ್ವಜನಿಕ ಪ್ರದೇಶಗಳಿಗೆ ಕರೆದೊಯ್ಯುವಾಗ ಅವುಗಳಿಗೆ ಮೌತ್ ಗಾರ್ಡ್ ಅನ್ನು ಕಡ್ಡಾಯವಾಗಿ ಹಾಕಬೇಕು ಎಂದು ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಪಿಟ್‌ಬುಲ್, ರಾಟ್‌ವೀಲರ್ ಮತ್ತು ಡೊಗೊ ಅರ್ಜೆಂಟಿನೊ ತಳಿಯ ನಾಯಿಗಳನ್ನು ಹೊಂದಿದ್ದರೆ ಅಥವಾ ಖರೀದಿಸಿದರೆ ಮುಂದೊದಗಬಹುದಾದ ಅಪಾಯಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ. ಈ ಎಲ್ಲಾ 3 ತಳಿಯ ನಾಯಿಗಳನ್ನು ಗಾಜಿಯಾಬಾದ್‌ನಲ್ಲಿ ನಿಷೇಧಿಸಲಾಗಿದೆ ಎಂದು ಬಿಜೆಪಿ ನಾಯಕ ಮತ್ತು ಜಿಎಂಸಿ ಕೌನ್ಸಿಲರ್ ಸಂಜಯ್ ಸಿಂಗ್ ತಿಳಿಸಿದರು.

astr