- Advertisement -
- Advertisement -

ಪುತ್ತೂರು: ಪುತ್ತೂರು ವಕೀಲರ ಸಂಘದ 2026-27 ಮತ್ತು 2027-28ರ ವರ್ಷಗಳ ಅವಧಿಗೆ ಇಂದು ಬೆಳಿಗ್ಗೆ ನಡೆದ ಚುನಾವಣೆಯಲ್ಲಿ ಸಂತೋಷ್ ಕುಮಾರ್ ಕೆ. ಗೆಲುವು ಸಾಧಿಸಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಮಹಾಬಲ ಶೆಟ್ಟಿ ಕೊಮ್ಮಂಡ, ಕಾರ್ಯದರ್ಶಿ ಸ್ಥಾನಕ್ಕೆ ಸ್ವಾತಿ ಜಗನ್ನಾಥ ರೈ, ಕೋಶಾಧಿಕಾರಿಯಾಗಿ ಭಾರತಿ ಎ ಹಾಗೂ ಜತೆ ಕಾರ್ಯದರ್ಶಿ ಸ್ಥಾನಕ್ಕೆ ಉದಯಚಂದ್ರ ಕರಂಬಾರು, ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಗಳಾಗಿ ಎಸ್.ಪ್ರವೀಣ್ ಕುಮಾರ್, ಜಯಾನಂದ ಕೆ. ಹಾಗೂ ಮನೋಹರ್ ಎ. ಅವರು ಕರ್ತವ್ಯ ನಿರ್ವಹಿಸಿದರು.
- Advertisement -








