Monday, June 15, 2026
spot_imgspot_img
spot_imgspot_img

ಪೆರುವಾಯಿ: ಮುಚ್ಚಿರಪದವು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27 ನೇ ಸಾಲಿನ ವಿದ್ಯಾರ್ಥಿಗಳ ಚುನಾವಣೆ-ಮುಖ್ಯಮಂತ್ರಿಯಾಗಿ ಮೊಹಮ್ಮದ್ ಯಾಶಿಫ್ ಹಾಗೂ ಉಪಮುಖ್ಯ ಮಂತ್ರಿಯಾಗಿ ಸಾಜಿದ ಆಯ್ಕೆ

- Advertisement -
- Advertisement -

ಪೆರುವಾಯಿ: ಮುಚ್ಚಿರಪದವು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 2026-27 ನೇ ಸಾಲಿನ ವಿದ್ಯಾರ್ಥಿಗಳ ಚುನಾವಣೆ ಜೂ. 12 ನೇ ಶುಕ್ರವಾರ ನಡೆಯಿತು.ಶಾಲಾ ಮುಖ್ಯಮಂತ್ರಿಯಾಗಿ 6 ನೇ ತರಗತಿಯ ಯಾಶಿಫ್ ಅವರನ್ನು ವಿದ್ಯಾರ್ಥಿಗಳು ಮತದಾನದ ಮೂಲಕ ಆಯ್ಕೆ ಮಾಡಿದರು. ಉಪಮುಖ್ಯ ಮಂತ್ರಿಯಾಗಿ 7 ನೇ ತರಗತಿ ವಿದ್ಯಾರ್ಥಿನಿ ಸಾಜಿದ ಆಯ್ಕೆಯಾದರು.

ಹಾಗೂ ಗೃಹ ಮಂತ್ರಿಯಾಗಿ ಫರ್ ಹಾನ್, ಬಶೀರ್, ಶಿಕ್ಷಣ ಮಂತ್ರಿಯಾಗಿ ಫಿದಾ ಹಾಗೂ ಝೀಬಾ, ಆಹಾರ ಮಂತ್ರಿಯಾಗಿ ಮಧುಶ್ರೀ, ಸಹದ್, ನಿರಾವರಿ ಮಂತ್ರಿಯಾಗಿ ಹಿಮಶ್ರೀ, ಮಿನಾಝ್, ರಿಂಶಾ, ಫರ್ ಹಾನ್, ಶಿಸ್ತು ಮಂತ್ರಿಯಾಗಿ ಮನ್ವಿತಾ ಅನ್ಫಾ, ಸ್ವಚ್ಛತಾ ಮಂತ್ರಿಯಾಗಿ ಲಿಬಾ, ಶಮ್ನಾ, ಕೃಷಿ ಮಂತ್ರಿಯಾಗಿ ವಿನ್ಸಿಟಾ, ಸನ, ಕ್ರೀಡಾ ಮಂತ್ರಿಯಾಗಿ ಸಾಜಿದಾ, ಯೂಸುಫ್, ಸಾಂಸ್ಕೃತಿಕ ಮಂತ್ರಿಯಾಗಿ ಮನ್ವಿತಾ, ಮಧುಶ್ರೀ, ಆರೋಗ್ಯ ಮಂತ್ರಿಯಾಗಿ ಯಮುನಾ ಸಹದ್ ರವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಾದ ಶ್ರೀಮತಿ ಗೌತಮಿ ವಸಂತ್, ಶ್ರೀಮತಿ ಪ್ರಮೀಳಾ ಅರುಣ್, ಕುಮಾರಿ ಧನುಶ್ರೀ, ಕುಮಾರಿ ಅಶ್ವಿನಿ ಉಪಸ್ಥಿತರಿದ್ದರು.

- Advertisement -

Related news

error: Content is protected !!