Saturday, June 20, 2026
spot_imgspot_img
spot_imgspot_img

ಗರ್ಭಿಣಿಗೆ ಅಂಗನವಾಡಿ ವಿತರಿಸಿದ ಪೌಷ್ಟಿಕ ಆಹಾರದ ಪ್ಯಾಕೇಟ್‌ನಲ್ಲಿ ಹಾವಿನ ಕಳೇಬರ ಪತ್ತೆ-ಆಕ್ರೋಶ

- Advertisement -
- Advertisement -

!

ಮಧ್ಯಪ್ರದೇಶ: ಗರ್ಭಿಣಿಯೊಬ್ಬರಿಗೆ ಅಂಗನವಾಡಿ ಕೇಂದ್ರದ ಮೂಲಕ ವಿತರಿಸಲಾದ ಪೌಷ್ಟಿಕ ಆಹಾರದ ಪೊಟ್ಟಣದಲ್ಲಿ ಹಾವಿನ ಮರಿಯ ಕಳೇಬರ ಪತ್ತೆಯಾದ ಘಟನೆ ಮಧ್ಯಪ್ರದೇಶದ ಪಂದುರ್ನಾ ಜಿಲ್ಲೆಯಲ್ಲಿ ವರದಿಯಾಗಿದೆ.

ಪೂರಕ ಪೌಷ್ಟಿಕ ಆಹಾರವಾದ ಲಡ್ಡುಗಳನ್ನು ಒಳಗೊಂಡ ಈ ಪೊಟ್ಟಣವನ್ನು ಕಾರ್ಘಾಟ್ ಕಮ್ಮಿ ಗ್ರಾಮದ ಗರ್ಭಿಣಿ ವಚ್ಚಲ ಬಾಯಿ ಧುರ್ವೆ ಎಂಬವರಿಗೆ ನೀಡಲಾಗಿತ್ತು. ಅದೃಷ್ಟವಶಾತ್‌ ಆಕೆ ಆಹಾರವನ್ನು ಸೇವಿಸಿರಲಿಲ್ಲ. ಆದರೆ ಮನೆಯಲ್ಲಿ ಪೊಟ್ಟಣವನ್ನು ತೆರೆದು ನೋಡಿದಾಗ, ಅದರೊಳಗೆ ಮೃತ ಹಾವಿನ ಕಳೇಬರ ಕಂಡು ಬೆಚ್ಚಿಬಿದ್ದರು.ಮಹಿಳೆಯ ಕುಟುಂಬಿಕರು ತಕ್ಷಣವೇ ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಸ್ಥಳೀಯಾಡಳಿತಕ್ಕೆ ಸುದ್ದಿ ತಿಳಿಸಿದರು. ಆ ಬಳಿಕ ಯೋಜನಾಧಿಕಾರಿ ಉಷಾ ಪಂಡ್ರೆ ಸೇರಿದಂತೆ ಮಹಿಳಾ ಹಾಗೂ ಶಿಶುಕಲ್ಯಾಣ ಇಲಾಖೆಯ ಅಧಿಕಾರಿಗಳು, ನಂದನವಾಡಿ ಪೊಲೀಸ್‌ ಹಾಗೂ ನಯೀಬ್‌ ತಹಶೀಲ್ದಾ‌ರ್ ಅವರೊಂದಿಗೆ ಸ್ಥಳಕ್ಕೆ ಆಗಮಿಸಿದರು.

ಈ ಘಟನೆಯು ಗ್ರಾಮದಲ್ಲಿ ಭಯ ಹಾಗೂ ಆಕ್ರೋಶದ ವಾತಾವರಣವನ್ನು ಸೃಷ್ಟಿಸಿದೆ. ಅಂಗನವಾಡಿ ಮೂಲಕ ಗರ್ಭಿಣಿ ಹಾಗೂ ಮಕ್ಕಳಿಗೆ ಪೂರೈಕೆ ಮಾಡಲಾದ ಆಹಾರದ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.

- Advertisement -

Related news

error: Content is protected !!