Monday, August 17, 2026
spot_imgspot_img
spot_imgspot_img

ಮಂಗಳೂರು, ಜಿಲ್ಲಾ ಖಜಾನೆಯ ನೌಕರ ರೋಹನ್ ನಾಪತ್ತೆ

- Advertisement -
- Advertisement -

ಮಂಗಳೂರು: ನಗರದ ಜಿಲ್ಲಾ ಖಜಾನೆಯ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ರೋಹನ್ ಎಂ(33) ಎಂಬವರು ಆ.1ರಿಂದ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.ಬೆಂಗಳೂರಿನ ನಂಜಮ್ಮ ಲೇಔಟ್‌ನ ನಿವಾಸಿ ಮುನಿರಾಜ್ ರೆಡ್ಡಿ ಎಂಬವರ ಪುತ್ರ ರೋಹನ್ ಎಂಬವರು ಮಂಗಳೂರಿನ ಜಿಲ್ಲಾ ಖಜಾನೆಯಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

ಪೌರ್ಣಮಿಯ ಪ್ರಯುಕ್ತ ಗುಜರಾತ್‌ಗೆ ಹೋಗುದಾಗಿ ತೆರಳಿದ್ದ ರೋಹನ್ ಅವರು ಬಳಿಕ ಕಾಣೆಯಾಗಿದ್ದಾರೆ. ಫೋನ್ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾರೆ ಎಂದು ಅವರ ತಂದೆ ಮುನಿರಾಜ್ ರೆಡ್ಡಿ ಅವರು ಕಂಕನಾಡಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!