Thursday, October 1, 2026
spot_imgspot_img
spot_imgspot_img

ನಕಲಿ ಔಷಧಗಳ ಮಾರಾಟ ಪ್ರಕರಣ: ಮತ್ತೊಬ್ಬ ಪ್ರಮುಖ ಆರೋಪಿಯ ಬಂಧನ

- Advertisement -
- Advertisement -

ಬೆಂಗಳೂರು: ನಕಲಿ ಔಷಧಗಳ ಮರು ಪ್ಯಾಕಿಂಗ್ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ಅಧಿಕಾರಿಗಳು(ಎಸ್‌ಐಟಿ) ಬಾಲಸುಬ್ರಮಣಿಯನ್ ಎಂದು ಗುರುತಿಸಲಾದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.ಸಹಾಯಕ ಪೊಲೀಸ್‌ ಆಯುಕ್ತ ಅಂಜನ್‌ ಕುಮಾ‌ರ್ ಮತ್ತು ಅವರ ತಂಡವು ಮಂಗಳವಾರ ಸಂಜೆ ಚೆನ್ನೈನಲ್ಲಿ ಬಾಲಸುಬ್ರಮಣಿಯನ್ ನನ್ನು ವಶಕ್ಕೆ ಪಡೆದಿದ್ದಾರೆ. ಬಾಲಸುಬ್ರಮಣಿಯನ್ ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್ ರಾಜನ್ ಬಾಬುಗೆ ಸೇರಿದ ಮತ್ತೊಂದು ಕಂಪೆನಿಯ ಪಾಲುದಾರರಾಗಿದ್ದಾರೆ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.

ಆ.18ರಂದು ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ನಗರದ ಹೊರವಲಯದಲ್ಲಿರುವ ತಾವರೆಕೆಯ ಸಮೀಪದ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ಸುಮಾರು 4.91 ಕೋಟಿ ರೂ. ಮೌಲ್ಯದ ನಕಲಿ ಔಷಧಗಳು ಮತ್ತು ಉಪಕರಣಗಳನ್ನು ವಶಪಡಿಸಿಕೊಂಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರಕಾರ ಸಮಗ್ರ ತನಿಖೆಗಾಗಿ ಬೆಂಗಳೂರು ಪಶ್ಚಿಮ ವಲಯದ ಜಂಟಿ ಪೊಲೀಸ್ ಕಮಿಷನ‌ರ್ ಸಿ.ವಂಶಿಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ರಚಿಸಿತ್ತು.

ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್ ಅವರನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಆರೋಪಿಯ ಮಾಹಿತಿಯನ್ನು ಆಧರಿಸಿ, ಇದೀಗ ಬಾಲಸುಬ್ರಮಣಿಯನ್ ನನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!