Wednesday, September 16, 2026
spot_imgspot_img
spot_imgspot_img

ಶಾಲಾ ಬ್ಯಾಗ್‌ಗಳಿಂದ 38 ಕೆಜಿ ಗಾಂಜಾ ಸೀಜ್‌; ಮೂವರು ಅಪ್ರಾಪ್ತರು ಸೇರಿ ಐವರು ಪೊಲೀಸ್ ವಶಕ್ಕೆ..!

- Advertisement -
- Advertisement -

ಪಾಟ್ನಾ: ಬಿಹಾರದ ಹಾಜಿಪುರದಿಂದ ವಿದ್ಯಾರ್ಥಿಯೊಬ್ಬನ ಶಾಲಾ ಬ್ಯಾಗ್‌ನಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿದ್ದ 38 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮೂವರು ಅಪ್ರಾಪ್ತರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಳ್ಳಸಾಗಣೆದಾರರು ಪ್ರಯಾಣಿಸುತ್ತಿದ್ದ ಬಸ್ಸನ್ನು ತಡೆದು, 4 ಲಕ್ಷ ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ ಎಂದು ವೈಶಾಲಿಯ ಹಿರಿಯ ಪೊಲೀಸ್ ಅಧೀಕ್ಷಕ ಶುಭಾಂಕ್ ಮಿಶ್ರಾ ತಿಳಿಸಿದ್ದಾರೆ.

ಭಗವಾನ್‌ಪುರ ಪೊಲೀಸ್ ಮತ್ತು ಮದ್ಯಪಾನ ನಿಷೇಧ ಇಲಾಖೆಯ(ಪಾಟ್ನಾ) ಜಂಟಿ ತಂಡವು ಭಗವಾನ್‌ಪುರ ಅಡ್ಡಾ ಚೌಕ್‌ನಲ್ಲಿ ಬ್ಯಾರಿಕೇಡ್ ಹಾಕಿ, ಮುಜಫರ್‌ಪುರದಿಂದ ಪಾಟ್ನಾಕ್ಕೆ ತೆರಳುತ್ತಿದ್ದ ಬಸ್ಸನ್ನು ತಡೆಗಟ್ಟಿತು. ನಂತರ, ಅವರು ಬಸ್ಸಿನೊಳಗೆ ಪ್ರವೇಶಿಸಿ ಅನುಮಾನಾಸ್ಪದ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದರು.

ಶೋಧದ ವೇಳೆ, ಅಪ್ರಾಪ್ತರ ಶಾಲಾ ಬ್ಯಾಗ್‌ಗಳಲ್ಲಿ ಅಡಗಿಸಿಟ್ಟಿದ್ದ ಹೆಚ್ಚಿನ ಪ್ರಮಾಣದ ಗಾಂಜಾವನ್ನು ಪೊಲೀಸರು ಪತ್ತೆಹಚ್ಚಿದ್ದು, ಐವರು ಕಳ್ಳಸಾಗಣೆದಾರರಿಂದ ಒಟ್ಟು 38 ಕೆಜಿ ನಿಷೇಧಿತ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಯಿತು.

‘ಆಪರೇಷನ್ ನೀಲಕಂಠ’ದ ಅಡಿಯಲ್ಲಿ ಆ ಐವರನ್ನು ಬಂಧಿಸಲಾಗಿದೆ. ಪೊಲೀಸರು ಅವರೆಲ್ಲರನ್ನೂ ವಶಕ್ಕೆ ಪಡೆದು ಕಾನೂನು ಕ್ರಮವನ್ನು ಆರಂಭಿಸಿದ್ದಾರೆ. ಪೊಲೀಸರ ಪ್ರಕಾರ, ಮಾದಕ ವಸ್ತುಗಳನ್ನು ಪೂರೈಸಲು ಕಳ್ಳಸಾಗಣೆದಾರರು ಪಾಟ್ನಾದತ್ತ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

- Advertisement -

Related news

error: Content is protected !!