Saturday, April 20, 2024
spot_imgspot_img
spot_imgspot_img

40 ದಿನಗಳಲ್ಲಿ 1 ಲಕ್ಷಕ್ಕೂ ಅಧಿಕ ಓದುಗರ ಬಳಿ ತಲುಪಿದ ವಿ ಟಿವಿ

- Advertisement -G L Acharya panikkar
- Advertisement -

ಇವತ್ತಿನ ದಿನಗಳಲ್ಲಿ ಗಲ್ಲಿಗೆ ಒಂದರಂತೆ ಮಾಧ್ಯಮಗಳು ತಲೆಎತ್ತುತ್ತಿವೆ. ಈ ನಡುವೆ ಸುಳ್ಳು ಸುದ್ದಿಗಳ ಭರಾಟೆ ಕೂಡ ಜೋರಾಗಿದೆ. ಹೀಗಾಗಿ ಜನರಿಗೆ ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ತಿಳಿದುಕೊಳ್ಳಲು ಗೊಂದಲವಾಗುತ್ತಿದೆ. ಆದರೆ ಇವೆಲ್ಲದರ ನಡುವೆ ವಿಭಿನ್ನವಾಗಿ ನಿಂತಿದೆ ವಿ ಟಿವಿ.

 ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಪ್ರಪ್ರಥಮ ಅಂತರ್ಜಾಲ ಮಾಧ್ಯಮ ವಿ ಟಿವಿ. ಯಾವುದೇ ರಾಜಕಾರಣಿಗಳ,ಪ್ರಭಾವಿ ವ್ಯಕ್ತಿಗಳ ಹಿನ್ನಲೆಯಿಲ್ಲದೆ  ಪರ್ತಕರ್ತರ ಸಹಕಾರದಲ್ಲಿ  ಹುಟ್ಟಿಕೊಂಡ ಸಂಸ್ಥೆಯಿದು. ಈ ಅಂತರ್ಜಾಲ ಮಾಧ್ಯಮ ಹುಟ್ಟಿ 40 ದಿನಗಳಾದ್ರೂ  ಜನರ ಬಳಿ ಮಾತ್ರ ಅತೀ ವೇಗವಾಗಿ ತಲುಪಿದೆ. ಕೇವಲ 40 ದಿನದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಓದುಗರನ್ನು ಸಂಪಾದಿಸಿದೆ.

ಮೊತ್ತಮೊದಲ ಬಾರಿಗೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವ ವೇಳೆ ನಡೆದ ಅದ್ಧೂರಿ ಕಾರ್ಯಕ್ರಮ ನಡೆಸುವ ಮೂಲಕ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ವಿಟಿವಿ ಯೂಟ್ಯೂಬ್ ಚಾನೇಲ್ ಅನ್ನು ಲೋಕಾರ್ಪಣೆಗೊಳಿಸಲಾಗಿತ್ತು. ಅದು ಯಶಸ್ಸಿನ ಹೆಜ್ಜೆ ಇಟ್ಟಿದ್ದು, ಇಂದು ಜನಮಾನಸದಲ್ಲಿ ನೆಲೆನಿಂತಿದೆ. ಅದಾದ ಬಳಿಕ ವೆಬ್ ಸೈಟ್ ಪ್ರಾರಂಭಿಸಲಾಗಿತ್ತು.

 ಪ್ರತಿ ದಿನದ ಪ್ರತಿ ಸುದ್ದಿಯನ್ನು ನಿಮ್ಮ ವಿ ಟಿವಿ ಮಿಸ್ ಮಾಡಲ್ಲ. ಕರಾವಳಿಯ ಎಲ್ಲ ಸುದ್ದಿಗಳು ಪ್ರತಿ ದಿನ  ವಿ ಟಿವಿ ವೆಬ್ ಸೈಟ್ ನಲ್ಲಿ ಲಭ್ಯವಿರುತ್ತದೆ. ಇಷ್ಟೇ ಅಲ್ಲ ರಾಜ್ಯ, ದೇಶ, ಗಲ್ಫ್ ಸುದ್ದಿಗಳ ಅಪ್ ಡೇಟ್ ಕೂಡ ಸಿಗುತ್ತದೆ. ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಕೃಷಿ, ಸಂಸ್ಕೃತಿಗೆ ಸಂಬಂಧಿಸಿದ ಸುದ್ದಿಗಳನ್ನುನಿಮ್ಮ ವಿ ಟಿವಿ ವೆಬ್ ಸೈಟ್ ದಿನಂಪ್ರತಿ ಅನಾವರಣ  ಮಾಡುತ್ತದೆ.  ಕೇವಲ ವೆಬ್ ಸೈಟ್ ಮಾತ್ರವಲ್ಲ ವಿ ಟಿವಿಯ ವಾಟ್ಸ್ ಆ್ಯಪ್, ಫೇಸ್ ಬುಕ್ ನಲ್ಲೂ ಸುದ್ದಿಗಳನ್ನು ಬಿತ್ತರಿಸುತ್ತಿದ್ದೇವೆ.

 ಕೇವಲ 40 ದಿನದಲ್ಲಿ 1 ಲಕ್ಷಕ್ಕೂ ಅಧಿಕ ಓದುಗರನ್ನು ಸಂಪಾದಿಸುವುದು ಸುಲಭದ ಮಾತಲ್ಲ. ಹೀಗಾಗಿ ಈ ಸಂಭ್ರಮಕ್ಕೂ ನೀವೇ ಸಾಕ್ಷಿ ಓದುಗರೇ…ನಿಮ್ಮ ಹಾರೈಕೆ, ಪ್ರೋತ್ಸಾಹದಿಂದ ನಮ್ಮಲ್ಲಿ ಮತ್ತಷ್ಟು ಹುರುಪು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ನಂಬಿಕೆ, ಪ್ರೋತ್ಸಾಹ ನಮ್ಮೊಂದಿಗೆ ಸದಾ ಇರಲಿ….

- Advertisement -

Related news

error: Content is protected !!