
ಬ್ರಹ್ಮಾವರ: ರೌಡಿಶೀಟರ್ ಸುಜಿತ್ ಪಿಂಟೊ (43) ಎಂಬಾತನನ್ನು ನಿನ್ನೆ ರಾತ್ರಿ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಮಾಡಿರುವ ಬಗ್ಗೆ ವರದಿಯಾಗಿದೆ.
ಸುಜಿತ್ ಪಿಂಟೊ ಮನೆಗೆ ಸಾಮಾನುಗಳನ್ನು ಪೂರೈಕೆ ಮಾಡುವ ರಿಕ್ಷಾ ಚಾಲಕ ಪ್ರಮೋದ್ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದು, ಆತನನ್ನು ಬಂಧಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ರೌಡಿಶೀಟರ್ ಸುಜಿತ್ ಪಿಂಟೊ ರಿಕ್ಷಾ ಚಾಲಕ ಪ್ರಮೋದ್ ಗೆ ಹಣ ನೀಡಲು ಬಾಕಿ ಇದ್ದು ಇದೇ ಕಾರಣಕ್ಕೆ ಪ್ರಮೋದ್ ಸುಜಿತ್ ಪಿಂಟೋನನ್ನು ತಾನು ಇರುವ ಸ್ಥಳಕ್ಕೆ ಬರುವಂತೆ ಕರೆದಿದ್ದನು.
ಅದರಂತೆ ಸುಜಿತ್ ಪಿಂಟೊ ಅಲ್ಲಿಗೆ ಹೋಗಿದ್ದು ಇಬ್ಬರು ಮದ್ಯದ ಅಮಲಿನಲ್ಲಿ ಹೊಡೆದಾಟ ಮಾಡಿಕೊಂಡಿದ್ದರೆನ್ನಲಾಗಿದೆ. ಈ ವೇಳೆ ಸಿಟ್ಟಿಗೆದ್ದ ಪ್ರಮೋದ್ ಕಬ್ಬಿಣದ ರಾಡಿನಿಂದ ಸುಜಿತ್ ಪಿಂಟೊನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ತಾನು ನೇತ್ರಾವತಿ ಸೇತುವೆ ದಾಟಿದ ಬಳಿಕ ಎಕ್ಕೂರು ಸಮೀಪದ ಇಂಡಿಯಾನ ಹಾಲ್ ಬಳಿ ಬಂದಾಗ ನಾಲ್ಕು ಮಂದಿ ರಸ್ತೆಯಲ್ಲಿ ನಿಂತಿದ್ದರು. ಅದರಲ್ಲಿ ಒಬ್ಬ ಕಬ್ಬಿಣದ ರಾಡ್ ಹಿಡಿದಿದ್ದು ಅಲ್ಲೇ ಇದ್ದ ಬ್ಯಾರಿಕೇಡ್ಗಳನ್ನು ಅಡ್ಡ ಹಾಕಿ ಪಿಕಪ್ ತಡೆದು ನಿಲ್ಲಿಸಲು ಪ್ರಯತ್ನಿಸಿದ. ಅಲ್ಲಿಂದ ತಾನು ತಪ್ಪಿಸಿಕೊಂಡು ನಂತೂರು ಕಡೆಗೆ ಪಿಕಪ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅವಾಚ್ಯ ಶಬ್ದದಿಂದ ಬೈದು ಪಿಕಪ್ ನಿಲ್ಲಿಸಲು ಎರಡು ಕಾರುಗಳಲ್ಲಿದ್ದ ವ್ಯಕ್ತಿಗಳು ಹೇಳುತ್ತಿದ್ದನ್ನು ಕೇಳಿಸಿಕೊಂಡೆ. ಆ ಪೈಕಿ ಒಂದು ಕಾರು ತನ್ನ ಪಿಕಪನ್ನು ಓವರ್ಟೇಕ್ ಮಾಡಿಕೊಂಡು ಕೆಪಿಟಿ ಜಂಕ್ಷನ್ ಬಳಿ ನಿಂತಿತು.
ಅಲ್ಲದೆ ಇಂಡಿಯಾನ ಹಾಲ್ ಬಳಿ ಇದ್ದ ವ್ಯಕ್ತಿಗಳೇ ಕೆಪಿಟಿ ಜಂಕ್ಷನ್ನಲ್ಲಿ ಕದ್ರಿ ಠಾಣೆ ಕಡೆಯಿಂದ ಬೊಂದೆಲ್ ಕಡೆಗೆ ಹೋಗಬೇಕಾಗಿದ್ದ ಯಾವುದೋ ಬಸ್ಸನ್ನು ಕೂಳೂರು ಕಡೆಗೆ ಹೋಗುವ ರಸ್ತೆಗೆ ಅಡ್ಡ ನಿಲ್ಲಿಸಿದ್ದರು. ಜೀವಭಯದಿಂದ ತಾನು ಕೆಪಿಟಿ ಜಂಕ್ಷನ್ನಿಂದ ಕಾವೂರು ಕಡೆಗೆ ಹೋಗುವ ರಸ್ತೆಯ ಮೂಲಕ ವಾಹನವನ್ನು ಚಲಾಯಿಸಿಕೊಂಡು ಹೋದಾಗ ಬೆಳಗ್ಗೆ 6:10ಕ್ಕೆ ಮೆಸ್ಕಾಂ ಪವರ್ ಗ್ರಿಡ್ನ ಎದುರು ಇರುವ ಪೆಟ್ರೋಲ್ ಪಂಪ್ ಬಳಿ ಕಾರಲ್ಲಿ ಬಂದವರು ಪಿಕಪ್ ವಾಹನವನ್ನು ಮತ್ತೆ ತಡೆದು ನಿಲ್ಲಿಸಲು ಪ್ರಯತ್ನಿಸಿದರು.
ಅಲ್ಲಿಂದ ಹೇಗೋ ತಪ್ಪಿಸಿಕೊಂಡು ತಾನು ಜೋಕಟ್ಟೆ ತಲುಪಿದೆ. ಹೀಗೆ ಎರಡು ಕಾರುಗಳಲ್ಲಿ ಬಂದ ಸುಮಾರು 5 ರಿಂದ 6 ಮಂದಿ ತಾನು ಚಲಾಯಿಸುತ್ತಿದ್ದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮುಹಮ್ಮದ್ ಅಫ್ರೀದ್ ದೂರು ನೀಡಿದ್ದಾರೆ. ಅದರಂತೆ ಕಾವೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.








