Saturday, October 3, 2026
spot_imgspot_img
spot_imgspot_img

ಬಂಟ್ವಾಳ : ಬ್ಯಾರಿ ಸಾಹಿತ್ಯ ಪರಿಷತ್ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆ

- Advertisement -
- Advertisement -

ಬಂಟ್ವಾಳ : ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆಯು ಬಿ.ಸಿ.ರೋಡು – ತಲಪಾಡಿಯ ಡೈಮಂಡ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪತ್ರಕರ್ತ ಸಂಶುದ್ದೀನ್ ಸಂಪ್ಯ ಮಾತನಾಡಿ, ತಾಯಿಗೆ ನೀಡುವ ಸ್ಥಾನಮಾನ, ಗೌರವ, ಪ್ರೀತಿಯನ್ನು ನಮ್ಮ ಮಾತೃ ಭಾಷೆಗೂ ನೀಡುವ ಮೂಲಕ ಬ್ಯಾರಿ ಭಾಷೆಯ ಉಳಿವು ಹಾಗೂ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ,

ಯಾವುದೇ ಭಾಷೆಯ ಉಳಿವು ಆ ಭಾಷೆಯ ಬಳಕೆಯ ಮೇಲೆ ಅವಲಂಬಿತವಾಗಿದ್ದು, ವ್ಯವಹಾರಿಕ ಅವಶ್ಯಕತೆಯ ದೃಷ್ಟಿಯಿಂದ ಎಲ್ಲಾ ಭಾಷೆಗಳನ್ನೂ ಕಲಿಯಬೇಕು. ಆದರೆ ಮನೆಯಲ್ಲಿ ಮಾತೃಭಾಷೆ ಬಳಕೆಯಾದಾಗ ಮಾತ್ರ ಆ ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಾಂಗ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡೈಮಂಡ್ ಇಂಟರ್ನ್ಯಾಷನಲ್ ಸ್ಕೂಲ್ ನ ಸಂಚಾಲಕ ಸಲೀಂ ಅಲ್ತಾಫ್ ಮಾತನಾಡಿ, ನಮ್ಮ ಡೈಮಂಡ್ ಇಂಟರ್ನ್ಯಾಷನಲ್ ಸ್ಕೂಲ್ ಆರಂಭವಾಗಿ 12 ವರ್ಷಗಳಾದರೂ ಇದುವರೆಗೂ ಆಂಗ್ಲ ಭಾಷೆಯ ಹೊರತಾಗಿ ಬೇರೆ ಯಾವುದೇ ಭಾಷೆಯಲ್ಲಿ ಕಾರ್ಯಕ್ರಮ ಮಾಡಿಲ್ಲ, ಆದರೆ ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದೀಗ ಪ್ರಪ್ರಥಮ ಬಾರಿಗೆ ಸಂಪೂರ್ಣವಾಗಿ ಬ್ಯಾರಿ ಭಾಷೆಯಲ್ಲೇ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಹಿತದೃಷ್ಟಿಯಿಂದ ನಡೆಯುವ ಕಾರ್ಯಕ್ರಮಗಳಿಗೆ ಸಹಕಾರ ನೀಡಲು ಡೈಮಂಡ್ ಸ್ಕೂಲ್ ಸದಾ ಸಿದ್ಧವಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ ಮಾತನಾಡಿ, ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಅಭಿವೃದ್ಧಿಯ ದೃಷ್ಟಿಯಿಂದ ಪರಿಷತ್ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಬೃಹತ್ ಬ್ಯಾರಿ ಸಾಹಿತ್ಯ ಸಮ್ಮೇಳನ ದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಗೋಳ್ತಮಜಲು ಹಜಾಜ್ ಸಮೂಹ ಸಂಸ್ಥೆಗಳ ಪಾಲುದಾರ ಹಾಜಿ ಜಿ. ಅಹ್ಮದ್ ಮುಸ್ತಫಾ ಶುಭ ಹಾರೈಸಿದರು.ಲೊರೆಟ್ಟೊಪದವು ಇಝ್ಝತುನ್ನೂರು ಯತೀಂ ಖಾನಾ ಇದರ ಕೋಶಾಧಿಕಾರಿಹಂಝ ಪರ್ಲಿಯ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರುಗಳಾದ ಪಿ.ಮಹಮ್ಮದ್ ಪಾಣೆಮಂಗಳೂರು, ಝಕರಿಯಾ ಕಲ್ಲಡ್ಕ, ಸಂಶೀರ್ ಬುಡೋಳಿ, ಅಖಿಲ ಭಾರತ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಇಕೆಎ ಸಿದ್ದೀಕ್ ಅಡ್ಡೂರು ಅತಿಥಿಗಳಾಗಿ ಭಾಗವಹಿಸಿದ್ದರು.

ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಂಚಾಲಕ ಪಿ.ಎ. ರಹೀಂ ಅವರ ಅಧ್ಯಕ್ಷತೆಯಲ್ಲಿ ನಡೆದ ಬ್ಯಾರಿ ಕವಿಗೋಷ್ಠಿಯಲ್ಲಿ ಬ್ಯಾರಿ ಕವಿಗಳಾದ ಎಂ.ಪಿ. ಬಶೀರ್ ಅಹ್ಮದ್ ಬಂಟ್ವಾಳ,ಅಬೂಬಕ್ಕರ್ ಅಮ್ಮುಂಜೆ, ಆಯಿಷಾ ಯು.ಕೆ., ಆಯಿಷಾ ಪೆರ್ನೆ, ರಝಿಯಾ ಕಾವಳಕಟ್ಟೆ, ಸತ್ತಾರ್ ಗೂಡಿನಬಳಿ, ಸಲೀಂ ಬೋಳಂಗಡಿ, ಹನೀಫ್ ನಂದರಬೆಟ್ಟು, ಸರ್ಫಾಝ್ ಆಲಾಡಿ, ಸಲೀಂ ಮಾಣಿ ಕವನ ವಾಚಿಸಿದರು.

ಅಶ್ರಫ್ ಅಪೋಲೋ ಕಲ್ಲಡ್ಕರಶೀದ್ ನಂದಾವರ ಹಾಗೂ ಶರೀಫ್ ಪರ್ಲಿಯ ಇವರಿಂದ ಬ್ಯಾರಿ ಹಾಡುಗಾರಿಕೆ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಡೈಮಂಡ್ ಇಂಟರ್ನ್ಯಾಷನಲ್ ಸ್ಕೂಲ್ ನ ಟ್ರಸ್ಟಿ ಸನಾ ಅಲ್ತಾಫ್ ಅವರನ್ನು ಗೌರವಿಸಲಾಯಿತು. ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಪ್ರಧಾನ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಮಹಮ್ಮದ್ ನಂದಾವರ ವಂದಿಸಿದರು.ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!