Sunday, September 13, 2026
spot_imgspot_img
spot_imgspot_img

ವಿಟ್ಲದಲ್ಲಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ: ಆರ್‌ಎಂಎಸ್‌ಎ ಬಾಲಕಿಯರಿಗೆ ಪ್ರಥಮ

- Advertisement -
- Advertisement -

ವಿಟ್ಲ: ಕರ್ನಾಟಕ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರ್‌ಎಂಎಸ್‌ಎ ವಿಟ್ಲ ಇವರ ಸಹಯೋಗದಲ್ಲಿ ಬಂಟ್ವಾಳ ತಾಲೂಕು ಮಟ್ಟದ 14 ವರ್ಷ ವಯೋಮಿತಿಯ ಬಾಲಕ–ಬಾಲಕಿಯರ ಕಬಡ್ಡಿ ಪಂದ್ಯಾಟ ವಿಟ್ಲ ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರ್‌ಎಂಎಸ್‌ಎಯಲ್ಲಿ ನಡೆಯಿತು.

ಬಾಲಕರ ವಿಭಾಗದಲ್ಲಿ ಶ್ರೀರಾಮ ಹೈಸ್ಕೂಲ್ ಕಲ್ಲಡ್ಕ ಪ್ರಥಮ ಹಾಗೂ ಆರ್‌ಎಂಎಸ್‌ಎ ವಿಟ್ಲ ದ್ವಿತೀಯ ಸ್ಥಾನ ಪಡೆದವು. ಬಾಲಕಿಯರ ವಿಭಾಗದಲ್ಲಿ ಆರ್‌ಎಂಎಸ್‌ಎ ವಿಟ್ಲ ಪ್ರಥಮ ಹಾಗೂ ನಾರಾಯಣ ಗುರು ಶಾಲೆ ಪೂಂಜಾಲಕಟ್ಟೆ ದ್ವಿತೀಯ ಸ್ಥಾನ ಗಳಿಸಿತು.ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್‌ಎಂಎಸ್‌ಎ ಶಾಲೆಯ ಪ್ರಾಥಮಿಕ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷ ರವಿಶಂಕರ್ ಶಾಸ್ತ್ರಿ ವಹಿಸಿದ್ದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಾನಾಥ ವಿಟ್ಲ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್, ಪೊಲೀಸ್ ಅಧಿಕಾರಿ ವಿನಯ್, ಕಿರಣ್ ಕುಮಾರ್ ಬ್ರಹ್ಮಾವರ, ಎಸ್‌ಡಿಎಂಸಿ ಉಪಾಧ್ಯಕ್ಷೆ ವಿಶಾಲಾಕ್ಷಿ ಅಮೀನ್ ಸೇರಿದಂತೆ ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಆರ್‌ಎಂಎಸ್‌ಎ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ವಾರಿಜ ಬಿ.ಎ. ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ವಂದಿಸಿದರು. ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!