Tuesday, July 14, 2026
spot_imgspot_img
spot_imgspot_img

ಭಾರತ-ನೇಪಾಳ ಗಡಿ ದಾಟಲು ಯತ್ನಿಸುತ್ತಿದ್ದ ಅಮೆರಿಕ ಪ್ರಜೆ ಬಂಧನ; ತನಿಖೆ ಚುರುಕುಗೊಳಿಸಿದ ಅಧಿಕಾರಿಗಳು

- Advertisement -
- Advertisement -

ಹೊಸದಿಲ್ಲಿ : ಮಾನ್ಯವಾದ ಪ್ರಯಾಣ ದಾಖಲೆಗಳಿಲ್ಲದೆ ನೇಪಾಳದ ಗಡಿ ದಾಟಲು ಪ್ರಯತ್ನಿಸುವಾಗ ಭಾರತ-ನೇಪಾಳ ಗಡಿಯಲ್ಲಿ ಶನಿವಾರ ಸಶಸ್ತ್ರ ಸೀಮಾ ಬಲದಿಂದ ಬಂಧಿತ ಅಮೆರಿಕದ ಪ್ರಜೆಯನ್ನು ಕೇಂದ್ರ ಗುಪ್ತಚರ ಮತ್ತು ಭದ್ರತಾ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.ಬಂಧಿತನನ್ನು ಜೋರ್ಡಾನ್ ಬ್ರೌನ್(36) ಎಂದು ಗುರುತಿಸಲಾಗಿದೆ.

ಈತ ತನ್ನನ್ನು ಅಮೆರಿಕದ ಕ್ಯಾಲಿಫೋರ್ನಿಯಾದ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ಆತನನ್ನು ಪ್ರಾಥಮಿಕವಾಗಿ ವಿಚಾರಣೆ ನಡೆಸಿದಾಗ ಯಾವುದೇ ಅನುಮಾನಾಸ್ಪದ ಅಥವಾ ದೇಶವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿಲ್ಲ ಎಂದು ಪ್ರಕರಣದ ಮಾಹಿತಿ ಹೊಂದಿರುವ ಅಧಿಕಾರಿಗಳು ತಿಳಿಸಿದ್ದಾರೆ.ತನಿಖಾ ಸಂಸ್ಥೆಗಳು ಆತನ ಗುರುತು, ಪ್ರಯಾಣ ಇತಿಹಾಸ, ವಿವಿಧ ದೇಶಗಳಿಗೆ ಹಿಂದಿನ ಭೇಟಿ ಮತ್ತು ಅವರು ಭಾರತಕ್ಕೆ ಪ್ರವೇಶಿಸಿದ ಸಂದರ್ಭ ಸೇರಿದಂತೆ ಪ್ರತಿಯೊಂದು ವಿಚಾರವನ್ನು ಸ್ವತಂತ್ರವಾಗಿ ಪರಿಶೀಲಿಸುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಪ್ರವಾಸಿ ವೀಸಾದಲ್ಲಿ ಥಾಯ್ಲೆಂಡ್‌ಗೆ ಪ್ರಯಾಣಿಸಿದ್ದೆ, ಆದರೆ ಅಲ್ಲಿ ಪಾಸ್‌ಪೋರ್ಟ್ ಕಳೆದುಕೊಂಡಿದ್ದೇನೆ. ಇದರಿಂದ ನಂತರ ಸಮುದ್ರದ ಮೂಲಕ ಶ್ರೀಲಂಕಾಗೆ ಬಂದು ಬಳಿಕ 2025ರ ನವೆಂಬರ್ ನಲ್ಲಿ ಸಮುದ್ರ ಮಾರ್ಗದ ಮೂಲಕ ಭಾರತವನ್ನು ಪ್ರವೇಶಿಸಿದೆ ಎಂದು ಆತ ಹೇಳಿದ್ದಾನೆ.ಮಹಾರಾಜ್‌ಗಂಜ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿ ಬಂಧನವನ್ನು ದೃಢಪಡಿಸಿದ್ದಾರೆ.

ಜುಲೈ 11ರಂದು ಅನುಮತಿಯಿಲ್ಲದೆ ನೇಪಾಳಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದಕ್ಕಾಗಿ ಸೋನೌಲಿ ಬಳಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ವಿಚಾರಣೆಯ ನಂತರ, ಅವನು ತನ್ನ ಹೆಸರನ್ನು ಜೋರ್ಡಾನ್ ಬ್ರೌನ್ ಎಂದು ಹೇಳಿಕೊಂಡಿದ್ದು, ಕ್ಯಾಲಿಫೋರ್ನಿಯಾದ ಪ್ರಜೆ ಎಂದು ಹೇಳಿದ್ದಾನೆ. ಈತ ಭಾರತಕ್ಕೆ ಪ್ರವೇಶಿಸಿ ಗೋವಾದಲ್ಲಿ ನೆಲೆಸಿದ್ದೆ ಎಂದು ತಿಳಿಸಿದ್ದಾನೆ. ಆತನ ಬಳಿ ಯಾವುದೇ ಪ್ರಯಾಣ ದಾಖಲೆಗಳು ಕಂಡು ಬಂದಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಿದ್ಧಾರ್ಥ್ ತಿಳಿಸಿದ್ದಾರೆ.

- Advertisement -

Related news

error: Content is protected !!