Saturday, August 8, 2026
spot_imgspot_img
spot_imgspot_img

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

- Advertisement -
- Advertisement -

ಮಡಿಕೇರಿ : ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ದಕ್ಷಿಣ ಕೊಡಗಿನ ಕುಟ್ಟ ಗ್ರಾಮದಲ್ಲಿ ನಡೆದಿದೆ.

ನಾಣಚ್ಚಿ ಹಾಡಿಯ ಮಾರಕ್ಕ(51) ಎಂಬುವವರೇ ಕಾಡಾನೆ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ ಮಹಿಳೆ. ಅಯ್ಯಪ್ಪ ದೇವರಕಾಡು ವ್ಯಾಪ್ತಿಯಲ್ಲಿ ಇಂದು(ಶನಿವಾರ) ಬೆಳಿಗ್ಗೆ ಕಾಡಾನೆ ದಾಳಿ ಮಾಡಿದ್ದು, ಮಾರಕ್ಕ ಅವರಿಗೆ ಕುಟ್ಟ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಗಡಿ ಭಾಗದ ಕೇರಳದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

- Advertisement -

Related news

error: Content is protected !!