ನವದೆಹಲಿ: ಸರ್ಕಾರಿ ಶಾಲಾ ಶಿಕ್ಷಕರಿಗೆ TET ಪರೀಕ್ಷೆ ಉತ್ತೀರ್ಣತೆ ಕಡ್ಡಾಯವಾಗಿದ್ದು, ಪರೀಕ್ಷೆ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಶಿಕ್ಷಕರ ಅನುಕೂಲಕ್ಕಾಗಿ ಉತ್ತೀರ್ಣತೆಗೆ ನೀಡಲಾದ ಕಾಲಾವಕಾಶವನ್ನು ವಿಸ್ತರಿಸಲಾಗಿದೆ.TET ಉತ್ತೀರ್ಣರಾಗಲು ಈ ಮೊದಲು 2027 ಆಗಸ್ಟ್ 31 ನ್ನು ಅಂತಿಮ ಗಡುವು ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಈ ಕಾಲಾವಧಿಯನ್ನು ಮತ್ತೊಂದು ವರ್ಷಕ್ಕೆ ಏರಿಸಿದ್ದು 2028 ರ ಆಗಸ್ಟ್ 31 ರ ವರೆಗೆ ವಿಸ್ತರಿಸಿದೆ. ಇದು ಶಿಕ್ಷಕರಿಗೆ ಕೊಂಚ ನಿರಾಳತೆಯನ್ನು ಕೊಟ್ಟಿದೆ. ಸುಪ್ರೀಂ ಕೋರ್ಟ್ ಅರ್ಜಿಗಳ ವಿಲೇವಾರಿ ವೇಳೆ ಹೆಚ್ಚುವರಿ ಅವಧಿಯನ್ನು ಮಂಜೂರು ಮಾಡಿದೆ.ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (RTE) 2009ರ ಸೆಕ್ಷನ್ 23ರ ಪ್ರಕಾರ, ಶಿಕ್ಷಕರಾಗಿ ನೇಮಕಗೊಳ್ಳಲು ಹಾಗೂ ಸೇವೆಯಲ್ಲಿ ಮುಂದುವರಿಯಲು TET ಕನಿಷ್ಠ ಅರ್ಹತೆಯಾಗಿದೆ.
ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿರುವುದರಿಂದ, ನೇಮಕಾತಿ ಹಾಗೂ ಸೇವಾ ನಿಯಮಗಳ ಜವಾಬ್ದಾರಿ ಆಯಾ ರಾಜ್ಯ ಸರ್ಕಾರಗಳಿಗೆ ಸೇರಿದೆ. 2013ಕ್ಕಿಂತ ಮೊದಲು ನೇಮಕಗೊಂಡ ಶಿಕ್ಷಕರ ಮೇಲೆಯೂ ಇದು ಪರಿಣಾಮ ಬೀರಲಿದ್ದು, ಅವರ ಸೇವಾ ದಾಖಲೆಗಳು ರಾಜ್ಯ ಸರ್ಕಾರಗಳ ಬಳಿ ಸುರಕ್ಷಿತವಾಗಿವೆ.ಶಿಕ್ಷಕರು ನಿಯಮಿತವಾಗಿ ಪರೀಕ್ಷೆ ಬರೆದು ಉತ್ತೀರ್ಣರಾಗಲು ಅನುಕೂಲವಾಗುವಂತೆ ತಿಂಗಳಿಗೊಮ್ಮೆ ಅಂದರೆ ವರ್ಷಕ್ಕೆ ಎರಡು ಬಾರಿ TET ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.








