ಸಂಘವು 1087.99 ಕೋಟಿ ವ್ಯವಹಾರ ಮಾಡಿ 4,04,48,775.71 ಲಾಭಗಳಿಸಿದೆ:- ಅಧ್ಯಕ್ಷ ಹೆಚ್. ಜಗನ್ನಾಥ ಸಾಲ್ಯಾನ್





ವಿಟ್ಲ ಗ್ರಾಮೀಣ ಸಹಕಾರಿ ಸಂಘ ನಿಯಮಿತ ಕೇಂದ್ರ ಕಛೇರಿಯನ್ನು ವಿಟ್ಲದಲ್ಲಿ ಹೊಂದಿದ್ದು, ಕನ್ಯಾನ, ಕಲ್ಲಡ್ಕ, ಬಿ.ಸಿ ರೋಡ್, ಪುತ್ತೂರು,ಉಪ್ಪಿನಂಗಡಿಯಲ್ಲಿ ಶಾಖೆಗಳನ್ನು ಹೊಂದಿದೆ.
ವಿಟ್ಲ ಗ್ರಾಮೀಣ ಸಹಕಾರಿ ಸಂಘ ನಿಯಮಿತ ಇದರ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಹೆಚ್. ಜಗನ್ನಾಥ ಸಾಲಿಯಾನ್ ರವರ ಅಧ್ಯಕ್ಷತೆಯಲ್ಲಿ ವಿಟ್ಲ ಶಾಂತಿನಗರ ಅಕ್ಷಯ ಸಮುದಾಯ ಭವನದಲ್ಲಿ ನಡೆಯಿತು. ಬ್ಯಾಂಕಿನ ಹಿರಿಯ ಸದಸ್ಯರಾದ ಈಶ್ವರ ಭಟ್ ಡಿ, ಅನಂತ ಭಟ್ ಎನ್, ಪ್ರಕಾಶ್ ಕೆ.ಎಸ್, ಮಜಿ ರಾಮ್ ಭಟ್, ವೆಂಕಟರಮಣ ಭಟ್ ಸೂರ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.ವಿಟ್ಲ ಪದವಿಪೂರ್ವ ಕಾಲೇಜಿನ ಪ್ರಾಶುಂಪಾಲ ಪಿ ರಾಧಾಕೃಷ್ಣ ಭಟ್ ಈ ಸಂದರ್ಭದಲ್ಲಿ ಸ್ತೋತ್ರ ಪಠಿಸಿದರು.



ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಹೆಚ್. ಜಗನ್ನಾಥ ಸಾಲಿಯಾನ್ ಮಾತನಾಡಿ ’2025-26ರಲ್ಲಿ ಸಂಘದಲ್ಲಿ 731 “ಎ” ತರಗತಿ ಸದಸ್ಯರು ಸೇರ್ಪಡೆಗೊಂಡಿದ್ದು 57ಸದಸ್ಯರು ಸದಸ್ಯತನವನ್ನು ಹಿಂದಕ್ಕೆ ಪಡೆದುದರಿಂದ ವರ್ಷದ ಅಂತ್ಯಕ್ಕೆ 9189 ಸದಸ್ಯರಿದ್ದು ಸಂಘದ ಒಟ್ಟು ಪಾಲು ಬಂಡವಾಳ ರೂ. 3,04,00,770.00 ಆಗಿರುತ್ತದೆ. ’2025-26ರಲ್ಲಿ ಸಂಘದ ಆರಂಭದ ಠೇವಣಿ 134.73 ಕೋಟಿ ರೂಪಾಯಿಗಳಾಗಿದ್ದು ವರ್ಷದ ಅಂತ್ಯಕ್ಕೆ 149.84 ಕೋಟಿ ರೂಪಾಯಿಗಳಿಗೆ ಏರಿದ್ದು ಠೇವಣಾತಿ ಶೇಕಡಾ 11.22 ಬೆಳವಣಿಗೆ ಆಗಿರುತ್ತದೆ.
’2025-26 ನೇ ಸಾಲಿನಲ್ಲಿ 1087.99 ಕೋಟಿ ರೂಪಾಯಿಗಳ ವ್ಯವಹಾರವನ್ನು ದಾಖಲಿಸಿ 4,04,48,775.71 ಲಾಭವನ್ನು ಗಳಿಸಿದ್ದು, ಅಡಿಟ್ ವರ್ಗೀಕರಣದಲ್ಲಿ ಕಳೆದ ಹಲವು ವರ್ಷಗಳಿಂದ ಸತತವಾಗಿ “ಎ” ತರಗತಿ ಯಲ್ಲಿ ಮುನ್ನಡೆಯುತ್ತಿದೆ ಎಂದು ಹೇಳಿದರು.
’2025-26 ನೇ ಸಾಲಿನ ಆಡಳಿತ ಮಂಡಳಿ ವರದಿ , ಲೆಕ್ಕ ಪರಿಶೋದನಾವರದಿ, ನಿವ್ವಳ ಲಾಭದ ವಿಂಗಡಣೆ, ಬಜೆಟ್ ಮೀರಿ ಖರ್ಚಾದ ವೆಚ್ಚಗಳ ಮಂಜೂರಾತಿ,2026-27ನೇ ಸಾಲಿನ ಅಂದಾಜು ಆಯವ್ಯಯ ಪತ್ರ ಮಂಜೂರಾತಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್ ಕೆ ಮಂಡಿಸಿದರು.
ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಜಯಂತಿ ಎಚ್ ರಾವ್, ಶುಭಲಕ್ಷ್ಮೀ, ದಯಾನಂದ ಆಳ್ವ ಕೆ, ಪೂವಪ್ಪ ಎಸ್, ದಿವಾಕರ ವಿ, ಕೇಶವ ಎ, ಗೋವರ್ಧನ ಕುಮಾರ್ , ಭಾಸ್ಕರ ಶೆಟ್ಟಿ, ರಾಮದಾಸ ಶೆಣೈ ವಿ, ಮೋಹನ್ ಕೆ ಎಸ್, ವಿಶ್ವನಾಥ ಎಂ, ತಿರುಮಲೇಶ್ವರ ಭಟ್ ಪಿ, ಸತೀಶ್ ಪಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಟ್ಲ ಗ್ರಾಮೀಣ ಸಹಕಾರಿ ಸಂಘ ನಿಯಮಿತ ಅಧ್ಯಕ್ಷರಾದ ಹೆಚ್. ಜಗನ್ನಾಥ ಸಾಲ್ಯಾನ್ ಸ್ವಾಗತಿಸಿ, ಉಪಾಧ್ಯಕ್ಷರಾದ ಮನೋರಂಜನ್ ಕೆ.ಆರ್ ಧನ್ಯವಾದವಿತ್ತರು. ಕಲ್ಲಡ್ಕ ಶಾಖೆಯ ಶಾಖಾಧಿಕಾರಿ ಶ್ರೀಮತಿ ಶ್ರೀನಿಧಿ ವಿ ಕುಡ್ವ ಕೆ ಪ್ರಾರ್ಥಿಸಿದರು. ಮಹೇಶ್ ಕುಮಾರ್ ಎಸ್ ಕಾರ್ಯಕ್ರಮ ನಿರೂಪಿಸಿದರು.
ಮಹಾಸಭೆಯಲ್ಲಿ ಭಾಗಿಯಾದ ಸಂಘದ ಎಲ್ಲಾ ಸದಸ್ಯರಿಗೆ ಗಿಫ್ಟ್ ವಿತರಿಸಲಾಯಿತು.








