- Advertisement -
- Advertisement -




ಕೆಲಿಂಜ : ಎಸ್‌ಪಿವೈಎಸ್‌ಎಸ್ ಕರ್ನಾಟಕ ನೇತ್ರಾವತಿ ವಲಯ ಹಾಗೂ ಹಿಂದೂ ಧಾರ್ಮಿಕ ಸೇವಾ ಸಮಿತಿ (ರಿ.) ಕೆಲಿಂಜ ಇದರ ಸಹಯೋಗದೊಂದಿಗೆ ಉಚಿತ ಯೋಗ ಶಿಕ್ಷಣ ತರಗತಿ ಶ್ರೀ ನಿಕೇತನ ಸಭಾಂಗಣ ಕೆಲಿಂಜದಲ್ಲಿ ನವೆಂಬರ್ 11 ಆದಿತ್ಯವಾರ ದಂದು ಉದ್ಘಾಟನೆಗೊಳ್ಳಲಿದೆ.
ನಿತ್ಯ ತರಗತಿಗಳು ತಾ. 11-11-2024 ರಿಂದ ಬೆಳಿಗ್ಗೆ 5:00 ರಿಂದ 6:30ರವರೆಗೆ ಯೋಗ ಶಿಕ್ಷಣ ತರಗತಿಯು 48 ದಿನಗಳ ಕಾಲ ನಡೆಯಲಿದೆ.
ಮಧುಮೇಹ, ರಕ್ತದೊತ್ತಡ, ಬೊಜ್ಜಿನ ಸಮಸ್ಯೆ, ಮೂಲವ್ಯಾಧಿ, ಆಸಿಡಿಟಿ, ಅಜೀರ್ಣ, ಸಂಧಿವಾತ, ನಿದ್ರಾಹೀನತೆ, ವಾತರೋಗ, ಮಾನಸಿಕ ಒತ್ತಡ, ಮಂಡಿನೋವು ಮತ್ತು ಬೆನ್ನುನೋವು ಇವುಗಳಿಗೆ ಸೂಕ್ತ ಚಿಕಿತ್ಸಾಕ್ರಮವನ್ನು ಯೋಗದ ಮೂಲಕ ನೀಡಿ ಗರಿಷ್ಟ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಕೇಂದ್ರ ಸಮಿತಿಯಿಂದ ತರಬೇತಿ ಪಡೆದ ಶಿಕ್ಷಕರಿಂದ ತರಗತಿಗಳನ್ನು ನಡೆಸಲಾಗುವುದು. 10ರಿಂದ ಮೇಲ್ಪಟ್ಟ ಎಲ್ಲಾ ವಯಸ್ಸಿನವರು ಭಾಗವಹಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8217644706, 9449893433, 8971792346

- Advertisement -