Friday, April 19, 2024
spot_imgspot_img
spot_imgspot_img

ಪತ್ರಿಕೆಯ ಜಾಹೀರಾತು ನೀಡಿ ಕಿಡ್ನಿ ಕದಿಯುತ್ತಾರೆ..! ರಾಜ್ಯದಿಂದ ರಾಜ್ಯಕ್ಕೆ ಸಂಚರಿಸಿ ಪಂಗನಾಮ ಹಾಕುತ್ತೆ ಈ ಗ್ಯಾಂಗ್

- Advertisement -G L Acharya panikkar
- Advertisement -
driving

ಜೀವ ಉಳಿಸಲು ಕಿಡ್ನಿ ಅವಶ್ಯಕತೆಯಿದೆ, ಅಂಗ ದಾನ ಮಾಡಿದವರಿಗೆ ಹಣವನ್ನೂ ನೀಡುತ್ತೇವೆ ಎಂದು ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡುತ್ತಿದ್ದ ಖದೀಮರ ಗ್ಯಾಂಗ್ ಅನ್ನು ನಂಬಿದ ಯುವಕನೋರ್ವ ಕಿಡ್ನಿ ಹಾಗೂ ಹಣವನ್ನು ಕಳೆದುಕೊಂಡ ಘಟನೆ ನಡೆದಿದೆ. ಈ ಬಗ್ಗೆ ಕೊಲ್ಕತ್ತಾದ ಲಾಲ್ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಾಹೀರಾತು ನೋಡಿದ ಅರೂಪ್ ಡೇ ಎಂಬ ವ್ಯಕ್ತಿಯು ಕರೆ ಮಾಡಿದ್ದಾರೆ. ಅತ್ತ ಕಡೆಯಿಂದ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿ ಮೂತ್ರಪಿಂಡ ದಾನ ಮಾಡುವಂತೆ ಕೇಳಿಕೊಂಡಿದ್ದಾರೆ. ಇದನ್ನು ನಂಬಿ ಹಣದ ಅವಶ್ಯಕತೆಯಿದ್ದ ಅರೂಪ್ ತಮ್ಮ ಕಿಡ್ನಿಯನ್ನು ದಾನ ಮಾಡಿದ್ದಾರೆ.

ಇದನ್ನೂ ಓದಿ: ಕಳೆದ 24 ಗಂಟೆಗಳಲ್ಲಿ 32,937 ಕೊರೋನಾ ಸೋಂಕಿತರು ಪತ್ತೆ!

ಅದರ ಪ್ರತಿಫಲವಾಗಿ 3 ಲಕ್ಷ ನೀಡುವುದಾಗಿ ತಿಳಿಸಿದ ತಂಡ ಆ ಬಳಿಕ ವಂಚಿಸಿದ್ದಾರೆ. ಇತ್ತ ಕಿಡ್ನಿ ಕಳೆದುಕೊಂಡ ನತದೃಷ್ಟ ಜಾಹೀರಾತಿನಲ್ಲಿದ್ದ ನಂಬರ್‌ಗೆ ಕರೆ ಮಾಡಿದ್ರೆ ಫೋನ್ ಸ್ವಿಚ್ ಆಫ್.

ಇದೇ ವೇಳೆ ಇತ್ತೀಚೆಗೆ ಉತ್ತರಾಖಂಡ್‌ನಲ್ಲೂ ಇಂತಹದ್ದೇ ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿದೆ. ಈ ತಂಡದಲ್ಲಿ ಮಹಿಳೆಯೊಬ್ಬಳಿದ್ದು, ಆಕೆಯೇ ಕಿಡ್ನಿ ಕಳುವಿನ ಸೂತ್ರಧಾರಿ ಎನ್ನಲಾಗಿದೆ.

ಇದನ್ನೂ ಓದಿ: ವಿಟ್ಲ: ಪಾಂಚಜನ್ಯ ಸಂಕೀರ್ಣದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಅಲ್ಲದೆ ಈ ತಂಡವು ಕೋಲ್ಕತಾ ಮತ್ತು ಉತ್ತರಾಖಂಡಕ್ಕೆ ಆಗಾಗ್ಗೆ ಪ್ರಯಾಣಿಸುತ್ತಿದ್ದು, ಬಡವರನ್ನೇ ಟಾರ್ಗೆಟ್ ಮಾಡಿ ವಂಚಿಸಿ ಕಿಡ್ನಿ ಕಳ್ಳಸಾಗಣೆ ವ್ಯವಹಾರ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹಲವು ರಾಜ್ಯಗಳಲ್ಲಿ ಕಿಡ್ನಿ ಕಳ್ಳಸಾಗಣೆಯ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಕೊಲ್ಕತ್ತಾದಲ್ಲಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಂಚಕರ ತಂಡವು ಬೇರೊಂದು ರಾಜ್ಯಕ್ಕೆ ಪ್ರಯಾಣಿಸಿರುವ ಸಾಧ್ಯತೆಯಿದೆ.

ಇದನ್ನೂ ಓದಿ: ಪೊಲೀಸ್​ ಕಾಲೋನಿಗೆ ನುಗ್ಗಿ ಕೈಚಳಕ ತೋರಿಸಿದ ಖದೀಮರು; ದೇವಸ್ಥಾನದ ಹುಂಡಿ, 3 ಮನೆಗೆ ಕನ್ನ

ಅಲ್ಲದೆ ಹಣಕ್ಕಾಗಿ ಕಿಡ್ನಿಯನ್ನು ಮಾರಾಟ ಮಾಡುವುದು ಕೂಡ ಕಾನೂನುಬಾಹಿರವಾಗಿರುವುದರಿಂದ ಹೀಗೆ ವಂಚನೆಗೆ ಒಳಗಾದ ಅನೇಕರು ದೂರು ನೀಡಿರುವ ಸಾಧ್ಯತೆ ಕಡಿಮೆ. ಹೀಗಾಗಿ ಈ ವಂಚಕ ಜಾಲದಲ್ಲಿ ಬಿದ್ದು ಅನೇಕರು ಕಿಡ್ನಿ ಕಳೆದುಕೊಂಡಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!