Saturday, June 28, 2025
spot_imgspot_img
spot_imgspot_img

ಕಂಬಳಬೆಟ್ಟುವಿನಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿ.

- Advertisement -
- Advertisement -

ಕಂಬಳಬೆಟ್ಟು : SPYSS ಯೋಗ ಸಮಿತಿಯು ಸಂಸ್ಕಾರ – ಸಂಘಟನೆ – ಸೇವೆ ಎಂಬ ಧ್ಯೇಯೋದ್ದೇಶದೊಂದಿಗೆ ಕಳೆದ 44 ವರ್ಷಗಳಿಂದ ಸಮಿತಿಯ ಪ್ರಧಾನ ಸಂಚಾಲಕರಾದ ಅ.ರಾ.ರಾಮಸ್ವಾಮಿ ರವರ ಮಾರ್ಗದರ್ಶನದಲ್ಲಿ ನುರಿತ ಯೋಗಶಿಕ್ಷಕರಿಂದ ಸಂಪೂರ್ಣ ಉಚಿತವಾಗಿ ಕರ್ನಾಟಕ ಕೇಂದ್ರವಾಗಿರಿಸಿಕೊಂಡು ವಿವಿಧ ರಾಜ್ಯ, ಹೊರರಾಷ್ಟ್ರಗಳಲ್ಲಿ ನಿತ್ಯ ಸಾವಿರಾರು ಶಾಖೆಗಳ ಮೂಲಕ ಲಕ್ಷಾಂತರ ಜನರಿಗೆ ಯೋಗದ ಮೂಲಕ ಸಂಸ್ಕಾರಯುತ ಜೀವನ ಶೈಲಿಯನ್ನು ಕಲಿಸುತ್ತಿದೆ.

ಮಂಗಳೂರಿನಲ್ಲಿ 200 ಕ್ಕೂ ಹೆಚ್ಚುಶಾಖೆ ಹಾಗೂ ಬಿ. ಸಿ ರೋಡ್, ಕಲ್ಲಡ್ಕ, ಉಪ್ಪಿನಂಗಡಿ,ನೆಲ್ಯಾಡಿ ಪುತ್ತೂರು,ಸುಳ್ಯ, ಪಂಜ, ವಿಟ್ಲ ಮತ್ತು ಸುಬ್ರಮಣ್ಯ ದಲ್ಲಿ ಈಗಾಗಲೇ ನಿತ್ಯ ತರಗತಿ ನಡೆಯುವ ಮೂಲಕ ಸಾವಿರಾರು ಜನರಿಗೆ ಯೋಗ ಶಿಕ್ಷಣದ ಜೊತೆಗೆ ಆರೋಗ್ಯ,ಧನಾತ್ಮಕ ಚಿಂತನೆ,ಕ್ರಿಯಾಶೀಲ ವ್ಯಕ್ತಿತ್ವ, ಆದರ್ಶ ಕುಟುಂಬದ ತರಬೇತಿ ನೀಡುತ್ತಾ ಸಮಾಜದಲ್ಲಿ ಉತ್ತಮವಾದ ಪರಿವರ್ತನೆಗೆ ಕಾರಣವಾಗಿದೆ.
ಪರಿಸರದ ಬಹುಜನರ ಅಪೇಕ್ಷೆ ಯಂತೆ ಶ್ರೀ ದುರ್ಗಾ ಮಂದಿರ ಕಂಬಳಬೆಟ್ಟು ವಿನಲ್ಲಿ ಅತೀ ಶೀಘ್ರದಲ್ಲಿ ಬೆಳಗ್ಗೆ ಹೊಸ ಯೋಗ ತರಗತಿ ಆರಂಭಿಸಲು ನಿರ್ಧರಿಸಿದೆ..

ಈ ತರಗತಿಯಲ್ಲಿ ಭಾಗವಹಿಸಲಿಚ್ಚಿಸುವವರು ಈ ಕೆಳಗೆ ಕಾಣಿಸುವ ಲಿಂಕ್ ಒತ್ತುವ ಮೂಲಕ ವಾಟ್ಸ್ ಗ್ರೂಪಿಗೆ JOIN ಆಗಿ.

https://chat.whatsapp.com/DN82pARNk5iLnjwKKtq243

- Advertisement -

Related news

error: Content is protected !!