Monday, June 30, 2025
spot_imgspot_img
spot_imgspot_img

ವಯಗ್ರಾ ಸೇವಿಸಿ ನಿರಂತರ ಮಿಲನದಲ್ಲಿ ತೊಡಗಿದ್ದ 50 ವರ್ಷದ ವ್ಯಕ್ತಿ..! ಸೈಡ್‌ ಎಫೆಕ್ಟ್‌ ಏನು ಗೊತ್ತಾ?

- Advertisement -
- Advertisement -

50 ವರ್ಷದ ವ್ಯಕ್ತಿಯೋರ್ವ ಲೈಂಗಿಕ ತೃಪ್ತಿಗಾಗಿ ವಯಗ್ರಾ ಸೇವಿಸಿ ತೀವ್ರ ನಿಗಾ ಘಟಕಕ್ಕೆ ಸೇರಿದ ಘಟನೆ ನಡೆದಿದೆ. ವಯಗ್ರಾ ಸೇವಿಸಿ 24 ಗಂಟೆ ಸಂಭೋಗದಲ್ಲಿ ತೊಡಗಿ ಆಸ್ಪತ್ರೆ ಪಾಲಾಗಿದ್ದು, ಈ ಘಟನೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸುದ್ದಿಯಾಗಿದೆ. 50ರ ಹರೆಯದ ಜರ್ಮನಿಯ ನಿವಾಸಿ ಇಟಲಿ ಪ್ರವಾಸದಲ್ಲಿದ್ದ. ಈ ವೇಳೆ ಲೈಂಗಿಕ ತೃಪ್ತಿಗಾಗಿ ವಯಾಗ್ರ ಮಾತ್ರೆ ಸೇವಿಸಿದ್ದಾನೆ. ಆ ನಂತರ 24 ಗಂಟೆಗೂ ಅಧಿಕ ಕಾಲ ಮಿಲನ ಕ್ರಿಯೆ ಮಾಡಿದ್ದಾನೆ. ಆ ನಂತರ ರಕ್ತಸ್ರಾವವಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದಾಗಿ ಎಂದು ಅಂತರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ.

ಆರಂಭದಲ್ಲಿ ಆತನ ಗುಪ್ತಾಂಗದಲ್ಲಿ ನಿಧಾನವಾಗಿ ನೋವು ಕಾಣಿಸಿಕೊಂಡಿದೆ. ನಂತರ ನೋವು ತೀವ್ರವಾಗಿದೆ. ಇದರಿಂದ ಗಾಬರಿಯಾಗೊಂಡ ವ್ಯಕ್ತಿ ತಕ್ಷಣವೇ ಕಾರು ಏರಿ ಆಸ್ಪತ್ರೆಗೆ ತೆರಳಿದ್ದಾನೆ. ಆತನನ್ನು ಪರೀಕ್ಷಿಸಿದ ವೈದ್ಯರು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ನಿರಂತರ ಸಂಭೋಗದಿಂದ ಗುಪ್ತಾಂಗದ ತುದಿಯಲ್ಲಿರುವ ಸೀಳಿನಲ್ಲಿ ಬಿರುಕುಬಿಟ್ಟು ರಕ್ತಸ್ರಾವವಾಗಿದೆ. ಆದ್ದರಿಂದ ಶಸ್ತ್ರಚಿಕಿತ್ಸೆ ಅಗತ್ಯವಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇಟಲಿಯ ಗ್ರೊಸೆಟೊ ಪ್ರದೇಶದ ಆಸ್ಪತ್ರೆಯೊಂದರಲ್ಲಿ ಈಗ ಈತ ಚಿಕಿತ್ಸೆ ಪಡೆಯುತ್ತಿದ್ದಾನೆ. ರಜೆಯ ಮೇಲೆ ಇಟಲಿಗೆ ಪ್ರವಾಸಕ್ಕೆ ಬಂದಿದ್ದ ಜರ್ಮನಿಯ ವ್ಯಕ್ತಿ ನಿರಂತರ ಸಂಭೋಗದಿಂದ ಅಸ್ವಸ್ಥಗೊಂಡಿದ್ದಾನೆ.

ಮೇ 11 ರಂದು ಮಿಸೆರಿಕಾರ್ಡಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಆತನ ಪತ್ನಿಯೂ ಆತನೊಂದಿಗೆ ಆಸ್ಪತ್ರೆಗೆ ತೆರಳಿದ್ದಾರೆ ಎನ್ನಲಾಗಿದೆ. ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ವಾರ ಕಳೆದರೂ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಸದ್ಯ ಸಂತ್ರಸ್ತ ಸೆಪ್ಟಿಕ್ ಆಘಾತದಿಂದ ಬಳಲುತ್ತಿದ್ದಾನೆ. ವೈದ್ಯರು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

- Advertisement -

Related news

error: Content is protected !!