Friday, April 26, 2024
spot_imgspot_img
spot_imgspot_img

ರಾತ್ರೋರಾತ್ರಿ 52 ಕೆ.ಜಿ ತೂಕದ ಮೀನಿನಿಂದ ಶ್ರೀಮಂತೆಯಾದ ವೃದ್ಧೆ

- Advertisement -G L Acharya panikkar
- Advertisement -

ಕೊಲ್ಕತ್ತಾ: ಕೊಲ್ಕತ್ತಾದಲ್ಲಿ ವೃದ್ಧೆ ಪುಷ್ಪಾ ಕಾರ್​ ಎಂಬವರಿಗೆ, ಭಾರೀ ಗಾತ್ರದ ಮೀನಿಂದ ಅದೃಷ್ಟ ಖುಲಾಯಿಸಿದ್ದು, ರಾತ್ರೋರಾತ್ರಿ ಲಕ್ಷಾಂತರ ರೂಪಾಯಿ ಹಣ ಗಳಿಸಿದ್ದಾರೆ. ಇಲ್ಲಿನ 24 ಪರಗಣ ಜಿಲ್ಲೆಯ ಸುಂದರ್‌ಬನ್‌ ಪ್ರದೇಶದಲ್ಲಿನ ಸಾಗರ ದ್ವೀಪದ ಬಳಿ 52 ಕೆ.ಜಿ ತೂಕದ ಮೀನು ಸಿಕ್ಕಿದೆ.

ಸಮುದ್ರದಲ್ಲಿ ಮೀನು ಹಿಡಿಯುತ್ತಿದ್ದಾಗ ಭಾರೀ ಗಾತ್ರದ ಮೀನು ಬಲೆಗೆ ಬಿದ್ದಿದ್ದನ್ನು ಕಂಡ ಪುಷ್ಪಾ ಅವರಿಗೆ ಆಶ್ಚರ್ಯವಾಗಿತ್ತು. ಸ್ವಲ್ಪ ಹತ್ತಿರ ತೆರಳಿ ಗಮನಿಸುತ್ತಿದ್ದಂತೆ ಅದು ಸಾಮಾನ್ಯ ಮೀನಲ್ಲ, ಬೃಹತ್‌ ಗಾತ್ರ ಭೋಲಾ ಮೀನು ಎಂದು ಗೊತ್ತಾಗಿದೆ. ಕೂಡಲೇ ಅವರು ನೀರಿಗಿಳಿದು ಹರಸಾಹಸಪಟ್ಟು ಮೀನನ್ನು ದಡಕ್ಕೆ ಎಳೆದು ತಂದಿದ್ದಾರೆ. ಬಳಿಕ ಸ್ಥಳೀಯ ಮಾರುಕಟ್ಟೆಯಲ್ಲಿ ಅದನ್ನು, ಮಾರಿ 3 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾರೆ.

ಈ ಮೀನಿನಿಂದ ನನಗೆ ನಿಜಕ್ಕೂ ಲಾಟರಿ ಹೊಡೆದಂತಾಗಿದೆ. ಹೋಲ್​ಸೇಲ್​ ಮಾರುಕಟ್ಟೆಯಲ್ಲಿ ಮೀನನ್ನು ಒಂದು ಕೆ.ಜಿಗೆ 6,200 ರೂಪಾಯಿಯಂತೆ  ಮಾರಾಟ ಮಾಡಿದೆ. ಇದರಿಂದ 3 ಲಕ್ಷಕ್ಕೂ ಅಧಿಕ ಹಣ ಗಳಿಸಿದೆ. ನಾನು ಜೀವನದಲ್ಲಿ ಎಂದೂ ಇಷ್ಟು ದೊಡ್ಡದಾದ ಮೀನನ್ನ ನೋಡಿರಲಿಲ್ಲ. ಬೆಂಗಾಲಿಯಲ್ಲಿ ಇದಕ್ಕೆ ಭೋಲಾ ಮೀನು ಅಂತಾರೆ ಎಂದು ಪುಷ್ಪಾ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

- Advertisement -

Related news

error: Content is protected !!